ಸುದ್ದಿಕನ್ನಡ ವಾರ್ತೆ
ನವದೆಹಲಿ: ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಕ್ಕೀಡಾದ ಘಟನೆಯ ಬೆನ್ನಲ್ಲೇ ಇದೀಗ ಮತ್ತೊಂದು ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ( Bomb threat to Air India flight). ಅಹಮದಾಬಾದ್ ನಲ್ಲಿ ಗುರುವಾರ ಮಧ್ಯಾನ್ಹ ಏರ್ ಇಂಡಿಯಾ ವಿಮಾನ ದುರಂತದಲ್ಲಿ 241 ಜನ ಪ್ರಯಾಣಿಕರು ಸಾವನ್ನಪ್ಪಿದ್ದರು. ಇದೀಗ ಬಾಂಬ್ ಬೆದರಿಕೆ ಮತ್ತೆ ಆತಂಕಕ್ಕೆ ಕಾರಣವಾಗಿದೆ.
ಥಾಯ್ಲೆಂಡ್ ನ ಫುಕೆಟ್ ದ್ವೀಪದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಥೈಲ್ಯಾಂಡ್ನಲ್ಲಿ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಲಾಗಿತ್ತು ಎಂದು ಫುಕೆಟ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಮಾಹಿತಿ ನೀಡಿದ್ದಾರೆ. ಬಾಂಬ್ ಬೆದರಿಕೆ ಹಿನ್ನಲೆಯಲ್ಲಿ ವಿಮಾನ ಎಐ- 379 ಲ್ಯಾಂಡ್ ಆಗಿದ್ದು, ಹಾರಾಟ ಮಾಡುತ್ತಿದ್ದ ವೇಳೆ ಈ ಬೆದರಿಕೆ ಬಂದಿದೆ. ಈ ಕಾರಣದಿಂದ ತಕ್ಷಣ ಭೂಸ್ಪರ್ಶಕ್ಕೆ ಮನವಿ ಮಾಡಲಾಗಿದೆ.(Bomb threat to Air India flight from Phuket island of Thailand to Delhi).
ಇದೊಂದು ಹುಸಿ ಬಾಂಬ್ ಕರೆ
ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಬಳಿಕ ವಿಮಾನವನ್ನು ಶೋಧಕ್ಕೊಳಪಡಿಸಿದ ಅಧಿಕಾರಿಗಳು ಬಳಿಕ ವಿಮಾನದಲ್ಲಿ ಯಾವುದೇ ಬಾಂಬ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಲ್ಲದೆ ಇದೊಂದು ಹುಸಿ ಬಾಂಬ್ ಕರೆ ಎಂದು ಪರಿಗಣಿಸಿ ಪೆÇಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ.