ಸುದ್ದಿಕನ್ನಡ ವಾರ್ತೆ
ಗುಜರಾತ್: ಗುರುವಾರ ಮಧ್ಯಾನ್ಹ ಲಂಡನ್‍ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿ ನಗರ ಪ್ರದೇಶದಲ್ಲಿ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಪತನಗೊಂಡಿದೆ. ವಿಮಾನದಲ್ಲಿ ಒಟ್ಟು 242 ಜನರಿದ್ದರು. ಹೊಸ ಜೀವನ ಕಟ್ಟಿಕೊಳ್ಳಲು ಲಂಡನ್ ಗೆ ತೆರಳುತ್ತಿದ್ದ ಡಾ. ಕೋನಿ ಕುಟುಂಬ (Dr. Connie family was going to London) ಈ ದುರ್ಘಟನೆಯಲ್ಲಿ ಸಾವನ್ನಪ್ಪಿದೆ.
ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸುವವರೆಗೂ, ಡಾ. ಕೋನಿ ವ್ಯಾಸ್ ಅವರ ಕುಟುಂಬವು ಹೊಸ ಜೀವನದ ಕನಸು ಕಾಣುತ್ತಿತ್ತು. ರಾಜಸ್ಥಾನದ ಬನ್ಸ್ವಾರಾದ ಖಾಸಗಿ ಆಸ್ಪತ್ರೆಯಲ್ಲಿ ರೋಗಶಾಸ್ತ್ರಜ್ಞರಾಗಿದ್ದ ಡಾ. ಕೋನಿ, ಲಂಡನ್ ಮೂಲದ ವೈದ್ಯರಾಗಿರುವ ತಮ್ಮ ಪತಿ ಪ್ರತೀಕ್ ಜೋಶಿ ಮತ್ತು ಅವರ ಮೂವರು ಮಕ್ಕಳ ಜೊತೆ ಪಯಣ ಬೆಳೆಸಿದ್ದರು.ಲಂಡನ್ ನಲ್ಲಿ ಹೊಸ ಜೀವನವನ್ನು ಪ್ರಾರಂಭಿಸಲು ಕಳೆದ ತಿಂಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಏರ್ ಇಂಡಿಯಾ ವಿಮಾನ ವಿಮಾನ ಹಾರುವ ಮೊದಲು, ಡಾ. ಕೋನಿ ಕುಟುಂಬವು ಸೆಲ್ಫಿ ಕ್ಲಿಕ್ಕಿಸಿಕೊಂಡಿತು.(Before taking off the Air India flight, Dr. Koni Family clicked a selfie) ವಿಮಾನದ ಒಂದು ಬದಿಯಲ್ಲಿ ಪೆÇೀಷಕರು ಮತ್ತು ಇನ್ನೊಂದು ಬದಿಯಲ್ಲಿ ಮಕ್ಕಳು ಕೂತಿದ್ದರು ಅದಾದ ಕೆಲವೇ ನಿಮಿಷಗಳ ನಂತರ, ಭೀಕರ ದುರಂತ ಸಂಭವಿಸಿತು.
ಪೆಸಿಫಿಕ್ ಆಸ್ಪತ್ರೆಯಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ, ಕೋನಿ ರವರು ಒಂದು ತಿಂಗಳಿನಿಂದ ಪ್ರಯಾಣಕ್ಕೆ ಉತ್ಸಾಹದಿಂದ ತಯಾರಿ ನಡೆಸುತ್ತಿದ್ದರು. ಸಂಬಂಧಿಕರ ಪ್ರಕಾರ, ರೇಡಿಯಾಲಜಿಸ್ಟ್ ಆಗಿರುವ ಜೋಶಿ ಕಳೆದ ನಾಲ್ಕು ವರ್ಷಗಳಿಂದ ಲಂಡನ್‍ನಲ್ಲಿ ಕೆಲಸ ಮಾಡುತ್ತಿದ್ದರು.
ಡಾ.ಕೋನಿ ದಂಪತಿಗಳು ಸುಮಾರು ಒಂದು ದಶಕದ ಹಿಂದೆ ವಿವಾಹವಾಗಿದ್ದರು. ತಮ್ಮ ಕುಟುಂಬವನ್ನು ಕರೆದೊಯ್ಯಲು ಜೋಶಿ ಮೂರು ದಿನಗಳ ಹಿಂದೆ ಲಂಡನ್‍ನಿಂದ ಹಿಂತಿರುಗಿದ್ದರು. ಅವರು ಬುಧವಾರ ಲಂಡನ್‍ಗೆ ವಿಮಾನದಲ್ಲಿ ಹೋಗಲು ಅಹಮದಾಬಾದ್‍ಗೆ ತೆರಳಿದರು” ಎಂದು ಸಂಬಂಧಿಕರಾದ ನಯನ್ ಜೋಶಿ ಹೇಳಿದರು. ಪ್ರಯಾಣದ ಮೊದಲು ಅವರನ್ನು ಬೀಳ್ಕೊಡಲು ಕೋನಿಯ ಕುಟುಂಬದ ಹಲವಾರು ಸದಸ್ಯರು ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ದುರದೃಷ್ಠವಷಾತ್ ವಿಮಾನ ಅಪಘಾತದಲ್ಲಿ ಡಾ.ಕೋನಿ ಕುಟುಂಬ ಸಾವನ್ನಪ್ಪಿದೆ.