ಸುದ್ಧಿಕನ್ನಡ ವಾರ್ತೆ
ಪ್ರಯಾಗರಾಜ್: ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಜಗತ್ತಿನಲ್ಲೇ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರವಾದ ಮಹಾಕುಂಭಮೇಳಕ್ಕೆ (Maha Kumbh Mela) ಪವಿತ್ರ ಸ್ನಾನ ಮಾಡಲು ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿಯವೆರೆ (ಇಂದು ಮಂಗಳವಾರದ ವರೆಗೆ) 1 ಮಿಲಿಯನ್ ಸಾಧುಸಂತರು ಸೇರಿದಂತೆ 147.6 ಮಿಲಿಯನ್ ಭಕ್ತಾದಿಗಳು ಈ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರಪ್ರದೇಶದ ಮಾಹಿತಿ ಇಲಾಖೆ ತಿಳಿಸಿದೆ.
ಉತ್ತರಪ್ರದೇಶದ ಮಾಹಿತಿ ಇಲಾಖೆ ನೀಡಿರುವ ಮಾಹಿತಿಯ ಅನುಸಾರ- ಜನವರಿ 13 ರಿಂದ ಪ್ರಯಾಗರಾಜ್ ನಲ್ಲಿ ಮಹಾಕುಂಭ ಮೇಳ ಆರಂಭಗೊಂಡಿದ್ದು ಇಲ್ಲಿಯವರೆಗೆ 147.6 ಮಿಲಿಯನ್ ಭಕ್ತರು ಗಂಗಾ,ಯಮುನಾ, ಸರಸ್ವತಿ ಈ ನದಿಗಳ ಸಂಗಮ ತೀರದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಈ ಮಹಾಕುಂಭ ಮೇಳಕ್ಕೆ (Maha Kumbh Mela) ಪ್ರತಿದಿನ ಆಗಮಿಸುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಇಲ್ಲಿ ಆಗಮಿಸುವ ಭಕ್ತರಿಗೆ ಎಷ್ಟೇ ಗರ್ದಿ ಇದ್ದರೂ ಕೂಡ ಯಾವುದೇ ತೊಂದರೆಯಾಗದಂತೆ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಿರುವುದು ಭಕ್ತಾದಿಗಳಿಂದ ಶ್ಲಾಘನೆಗೆ ಕಾರಣವಾಗಿದೆ.