ಸುದ್ಧಿಕನ್ನಡ ವಾರ್ತೆ
ಮಂತ್ರಾಲಯ: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ವಂಚಕರ ಜಾಲವೊಂದು ಇಲ್ಲಿಗೆ ಬರುವ ಭಕ್ತರಿಗೆ ವಂಚನೆ ಮಾಡುತ್ತಿದೆ. ನಕಲಿ ಯುಪಿಐ ಐಡಿ ಗಳ ಮೂಲಕ ಭಕ್ತರಿಂದ ಹಣ ಹಾಕಿಸಿಕೊಂಡು ಭಕ್ತರಿಗೆ ವಂಚನೆ ಮಾಡುತ್ತಿದ್ದಾರೆ, ಈ ಕುರಿತು ಭಕ್ತಾದಿಗಳು ಎಚ್ಚರಿಕೆ ವಹಿಸಬೇಕೆಂದು ಸ್ವತಃ ಮಂತ್ರಾಲಯ ಆಡಳಿತ ಮಂಡಳಿಯೇ ಎಚ್ಚರಿಕೆ ಸಂದೇಶ ರವಾನಿಸಿದೆ.

ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ಭಕ್ತರಿಗೆ ಕರೆ ಮಾಡುವ ಮೂಲಕ ವಂಚಕರು ಇಲ್ಲಿನ ಸೇವೆಗಳಿಗೆ ಮುಂಗಡ ಹಣ ಪಾವತಿ ಮಾಡಿಸಿಕೊಳ್ಳುತ್ತಿದ್ದಾರೆ. ರಾಯರ ಮೇಲಿನ ಭಕ್ತಿಯಿಂದ ಜನರು ಮೋಸಹೋಗುತ್ತಿದ್ದಾರೆ ಎಂದು ಮಂತ್ರಾಲಯ ಮಠದ ಆಡಳಿತ ಮಂಡಳಿ ಹೇಳಿದೆ.

ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಮುಂಗಡವಾಗಿ ರೂಂ ಬುಕಿಂಗ್ ಮಾಡುವಾಗ ಕೂಡ ಭಕ್ತಾದಿಗಳು ಎಚ್ಚರ ವಹಿಸಬೇಕು. ರೂಂ ಬುಕಿಂಗ್, ದೇವರ ಸೇವೆ ಸೇರಿದಂತೆ ವಿವಿಧ ಸೇವೆಗಳ ಹೆಸರಿನಲ್ಲಿ ವಂಚಕರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಭಕ್ತಾದಿಗಳು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಮಂತ್ರಾಲಯ ಮಠದ ಆಡಳಿತ ಮಂಡಳಿ ಹೇಳಿದೆ.