ಸುದ್ಧಿಕನ್ನಡ ವಾರ್ತೆ
Hubli: ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ಹುಬ್ಬಳ್ಳಿಯಿಂದ ವಿಶೇಷ ರೈಲು ಬಿಡಲಾಗಿದೆ. ವೇಳಾಪಟ್ಟಿ ಹೀಗಿದೆ.
ಕುಂಭಮೇಳಕ್ಕೆ ತೆರಳಲು ಹುಬ್ಬಳ್ಳಿಯಿಂದ ವಿಶೇಷ ರೈಲು ಓಡಾಟ ಆರಂಭಿಸಲಾಗಿದೆ. ಹುಬ್ಬಳ್ಳಿ-ತುಂಡ್ಲಾ ನಿಲ್ದಾಣಗಳ ನಡುವೆ ಈ ವಿಶೇಷ ರೈಲು ಓಡಾಟ ನಡೆಸಲಿದೆ.
ಫೆಬ್ರುವರಿ 6 ರಂದು ಗುರುವಾರ 20.10 ಗಂಟೆಗೆ ಎಸ್ ಎಸ್ ಎಸ್ ಹುಬ್ಬಳ್ಳಿಯಿಂದ ( ರೈಲು ಸಂಖ್ಯೆ-07382) ಹೊರಟು ಫೆಬ್ರುವರಿ 8 ರಂದು ಶನಿವಾರ 20.15 ಗಂಟೆಗೆ ಉತ್ತರಪ್ರದೇಶದ ತುಂಡ್ಲಾ ನಿಲ್ದಾಣ ತಲುಪಲಿದೆ.
ಫೆಬ್ರುವರಿ 9 ರಂದು ಭಾನುವಾರ 16.20 ಗಂಟೆಗೆ ಉತ್ತರಪ್ರದೇಶದ ತುಂಡ್ಲಾದಿಂದ ಹೊರಟು ಫೆಬ್ರುವರಿ 11 ರಂದು ಮಂಗಳವಾರ 18.40 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ಎರಡೂ ರೈಲುಗಳು ಧಾರವಾಡ, ಅಳ್ನಾವರ,ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ, ಘಟಪ್ರಭಾ, ರಾಜಭಾಗ,ಕುಡಚಿ,ಮೀರಜ್,ಸಾತಾರಾ, ಪುಣೆ,ದೋಂಡಕಾರ್ಡಲೈನ್, ಅಹಮ್ಮದ್ ನಗರ್, ಕೋಪರಗಾಂವ, ಮನ್ಮಾಡ್ , ಭೂಸಾವಲ್, ಖಾಂಡ್ವಾ, ಇಟಾರ್ಸಿ, ಪಿಪಾರಿಯಾ, ನರಸಿಂಗಪುರ, ಜಬಲಪುರ್, ಖಟ್ನಿ, ಮೈಹಾರ್, ಸತ್ನಾ, ಮಾಣಿಕಪುರ್, ಪ್ರಯಾಗರಾಜ್ ಜಂಕ್ಷನ್, ಫತೆಪುರ್, ಗೋವಿಂದಪುರಿ ಮತ್ತು ಇಟಾವಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಸಹಾಯವಾಣಿ:- 139 ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.