ಸುದ್ದಿ ಕನ್ನಡ ವಾರ್ತೆ
ಗಂಗಾವತಿ: ಗಂಗಾವತಿಯ ಗ್ರಾಮದ ಗ್ರಾಮದೇವತೆ ಶ್ರೀದುರುಗಮ್ಮದೇವಿಯ ಮಹಾರಥೋತ್ಸವ ಜ.13ರಂದು ಸಂಜೆ 5.30 ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಬೆಳ್ಳಿಗ್ಗೆ 09 ಗಂಟೆಗೆ ನಗರದ ಗಾಳೆಮ್ಮದೇವಿ ದೇವಾಲಯದಿಂದ 500ಕ್ಕೂ ಹೆಚ್ಚು ಮುತ್ತೈದೆಯರ ಕುಂಬ ಮೆರವಣಗೆ ಜರುಗಿತು. ಬೆಳ್ಳಿಗ್ಗೆ ಜಾವ ಶ್ರೀದುರುಗಮ್ಮದೇವಿಗೆ ಜಲಾಭಿಷೇಕ, ಪಂಚಾಮೃತಾಭಿಷೇಕ ನೆರವೇರಿತು. ಜಾತ್ರೆಗೆ ಗಂಗಾವತಿ ನಗರ ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು. ಬೆಳಗಿನಿಂದ ರಥೋತ್ಸವ ಸಮಯದ ತನಕ ಶ್ರೀಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಅನ್ನಪ್ರಸಾದ ಜರುಗಿತು.

ಮಹಾರಥೋತ್ಸವದ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ,ವೀರಪ್ಪ, ಮಾಜಿ ಸಚಿವ ಅಮರೇಗೌಡ ಭಯ್ಯಾಪೂರ, ಎಂ.ಮಲ್ಲಿಕಾರ್ಜುನನಾಗಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ನಗರಸಭೆ ಅಧ್ಯಕ್ಷ ಮೌಲಸಾಬ, ಉಪಾಧ್ಯಕ್ಷೆ ಪಾರ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಶ್ರೀದುರುಗಮ್ಮ ದೇವಾಲಯ ಕಮೀಟಿ ಅಧ್ಯಕ್ಷ ಜೋಗದ ನಾರಾಯಣಪ್ಪ, ಪದಾಧಿಕಾರಿಗಳಾದ ಜೋಗದ ಹನುಮಂತಪ್ಪ, ಅಮರಜ್ಯೋತಿ ನರಸಪ್ಪ, ಕೆ.ವೆಂಕಟೇಶ, ಮಾರೇಶ, ಮುಖಂಡರಾದ ಅಲಿಖಾನ್,ತಿಪ್ಪೇರುದ್ರಸ್ವಾಮಿ, ಮನೋಹರಗೌಡ,ಡ್ಯಾಗಿ ರುದ್ರೇಶ, ಪಂಪಣ್ಣನಾಯಕ,ಬಸವರಾಜ ಸ್ವಾಮಿ ಮಳಿಮಠ ಡಿ.ಕೆ.ಆಗೋಲಿ,ಅಕ್ಕಿ ಪ್ರಕಾಶ, ಅಯಜ್ ಬಿಚ್ಚಾಲಿ,ಉಮೇಶ ಸಿಂಗನಾಳ ಸೇರಿ ಅನೇಕರಿದ್ದರು.