ಸುದ್ದಿ ಕನ್ನಡ ವಾರ್ತೆ

ದಾಂಡೇಲಿ: ದಿನ ಬಳಕೆಯ ಅಡುಗೆ ಅನಿಲದ ಕೊರತೆ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೇಸ್ ಕಾರ್ಯಕರ್ತರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಭಾನುವಾರ ಮುಂಜಾನೆ ಕಟ್ಟಿಗೆಯಲ್ಲಿ ಚಹಾ ತಯಾರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಹಲವಾಯಿ ಮಾತನಾಡಿ, ವಿಶ್ವದಲ್ಲಿ ಭಾರತ ನಂಬರ್ ಒನ್ ಎಂದು ಹೇಳಿಕೊಳ್ಳುವ ಅಂಧ ಭಕ್ತರು , ಈಗ ದೇಶದಲ್ಲಿ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಕೊರತೆಯಾದರು ಮೌನ ವಹಿಸಿರುವುದು ಏಕೆ. ಕೇವಲ ಧರ್ಮದ ಆಫೀಮ್ ತಲೆಯಲ್ಲಿ ತುಂಬಿಕೊಂಡು ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಅಂಧ ಭಕ್ತರು ಈಗಲಾದರೂ ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಭವಿಷ್ಯ ಉಜ್ವಲವಾಗಲಿದೆ. ಇಲ್ಲದಿದ್ದರೆ ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿದ್ದ ಭಾರತ ನಮಗೆ ಕಾಣ ಸಿಗಲಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಮಹಿಳಾಧ್ಯಕ್ಷೆ ರೇಣುಕಾ ಬಂದಂ ಅವರು ಮಾತನಾಡಿ, ಅಡುಗೆ ಅನಿಲದ ಕೊರತೆಯಿಂದ ರಾಜ್ಯದ ಬಹುತೇಕ ಹೋಟೆಲ್ ಗಳು ಬೀಗ ಹಾಕಿಕೊಳ್ಳಲೇ ಬೇಕಾದ ಸನ್ನಿವೇಶ ಸೃಷ್ಟಿ ಯಾಗಿದೆ. ರೆಸಾರ್ಟ್ ಹೊಂ ಸ್ಟೇ ಗಳ ಪರಿಸ್ಥಿತಿಯಂತೂ ಹೇಳ ತೀರದಾಗಿದೆ. ಮನೆಯಲ್ಲಿನ ಗ್ರಹಿಣಿಯರ ಪರಿಸ್ಥಿತಿಯಂತೂ ಯಾರಿಗೂ ಬೇಡವಾಗಿದೆ. ಬಿಜೆಪಿ ಬೆಂಬಲಿಸವ ಜನರು ಈಗ ಉತ್ತರಿಸದೆ ಏಕೆ ಮೌನವಾಗಿದ್ದಾರೆ , ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಿನ ಬೆಲೆಯಲ್ಲಿ ದುಪ್ಪಟ್ಟು ಏರಿಕೆಯಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದರು.

ಹಿರಿಯ ಮುಖಂಡ ತಸವವರ ಸೌದಾಗರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ್ ಅವರುಗಳು ಮಾತನಾಡಿ, ಮದುವೆ ಆಗಿ ಹೆಂಡತಿಯನ್ನು ಬಿಟ್ಟು ಹೋದವರಿಗೆ ಇಂದಿನ ಮಹಿಳೆ ಯರ ಪರಿಸ್ಥಿತಿ ಅರ್ಥವಾಗಲಾರದು, ಕೇಂದ್ರ ಸರ್ಕಾರ ತನ್ನ ವಿದೇಶಾಂಗ ನೀತಿಯನ್ನು ಬದಲಿಸಿಕೊಳ್ಳದಿದ್ದರೆ ಬರ್ಬರವಾದ ದಿನಗಳನ್ನು ಮುಂದೆ ನಾವು ಕಾಣ ಬೇಕಾಗುತ್ತದೆ, ಟ್ರಂಪ್ ಹೇಳಿದಂತೆ ಕುಣಿಯುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ತೊಲಗಿಸದಿದ್ದರೆ. ಇನ್ನಷ್ಟು ಕಷ್ಟಕರ ದಿನಗಳನ್ನು ನಾವು ಕಾಣ ಬೇಕಾಗುತ್ತದೆ ಎಂದರು.

ನಿಕಟಪೂರ್ವ ನಗರ ಸಭೆ ಅಧ್ಯಕ್ಷ ಅಷ್ಪಾಕ್ ಶೇಖ್, ಮುಖಂಡರಾದ ಆರ್.ಪಿ. ನಾಯ್ಕ, ಅನೀಲ್ ದಂಡಗಲ್, ಬಶೀರ್ ಗಿರಿಯಾಲ, ನಗರ ಸಭೆ ಮಾಜಿ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರ್, ದಿವಾಕರ್ ನಾಯ್ಕ, ಪ್ರತಾಪಸಿಂಗ್ ರಜಪೂತ, ರವಿ ಚವ್ಹಾಣ, ಆಫ್ರೀನ್ ಕಿತ್ತೂರ್, ರೂಹಿನಾ ಖತೀಬ್, ಗ್ಯಾರಂಟಿ ತಾಲೂಕಾಧ್ಯಕ್ಷ ರಿಯಾಜ್ ಹಾಗೂ ಪಕ್ಷದ ಇನ್ನಿತರ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು