ತಾಯಲೂರಿನಲ್ಲಿ ಏಕ ವಿದ್ಯಾರ್ಥಿಗೆ ಪಿಯು ಪರೀಕ್ಷೆ
ಮುಳಬಾಗಿಲು: ಮಾ. ೨ರಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದ ಸರ್ಕಾರಿ ಪಿಯು ಕಾಲೇಜು ಕೇಂದ್ರದಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಹಾಜರಾಗಿದ್ದು ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಈ ವರ್ಷ ತಾಯಲೂರು ಸೇರಿದಂತೆ ಗುಟ್ಚಹಳ್ಳಿ (ಬಂಗಾರುತಿರುಪತಿ), ಎನ್.ಜಿ.ಹುಲ್ಕೂರು ಹಾಗೂ ಸುಂದರಪಾಳ್ಯದ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ತಾಯಲೂರು ಕಾಲೇಜು ಪರೀಕ್ಷಾ ಕೇಂದ್ರವಾಗಿ ನಿಗದಿಯಾಗಿತ್ತು.
ಪರೀಕ್ಷೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲಾಗಿತ್ತು.
ವಸಂತ್ ಕುಮಾರ್ ಎಂಬ ವಿದ್ಯಾರ್ಥಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಏಕೈಕ ಅಭ್ಯರ್ಥಿಯಾಗಿದ್ದು, ಮೊದಲ ಪಿಯುಸಿ ಮಧ್ಯದಲ್ಲಿ ನಿಲ್ಲಿಸಿದ ಕಾರಣದಿಂದ ಕೆ.ಜಿ.ಎಫ್ ಬಾಲಕರ ಪಿಯು ಕಾಲೇಜಿನ ಮುಕ್ತ ವಿಭಾಗದ ಮೂಲಕ ಪರೀಕ್ಷೆಗೆ ಹಾಜರಾಗಿದ್ದಾರೆ.
ವಾಣಿಜ್ಯ ವಿಭಾಗದ ಸಂಖ್ಯಾಶಾಸ್ತ್ರ ವಿಷಯ ಬರೆಯಲು ಬಂದಿರುವುದಾಗಿ ಅವರು ತಿಳಿಸಿದ್ದಾರೆ.
ಒಬ್ಬ ಪರೀಕ್ಷಾರ್ಥಿಗೆ ಆರು ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆಪತ್ರಿಕೆಗಳನ್ನು ಒಂದು ಕೇಂದ್ರದಿAದ ಮತ್ತೊಂದು ಕೇಂದ್ರಕ್ಕೆ ಸಾಗಿಸುವ ವಾಹನ ಚಾಲಕರಿಗೆ ಹಲವು ವರ್ಷಗಳಿಂದ ಪರೀಕ್ಷಾ ಮಂಡಳಿಯಿAದ ಭತ್ಯೆ ನೀಡಲಾಗಿಲ್ಲವೆಂದು ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಇಒ ಹಾಗೂ ತಹಶೀಲ್ದಾರ್ ಅವರ ವಾಹನ ಚಾಲಕರೇ ಪ್ರಶ್ನೆಪತ್ರಿಕೆ ಸಾಗಣೆ ಕಾರ್ಯ ನಿರ್ವಹಿಸುತ್ತಿದ್ದರೂ, ಅವರಿಗೆ ಯಾವುದೇ ಸಾಗಣೆ ವೆಚ್ಚ ನೀಡದಿರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿದರು.
