ಸುದ್ದಿ ಕನ್ನಡ ವಾರ್ತೆ

ಚಿಕ್ಕೋಡಿ :ಅತ್ತೆಯ ಕಾಟಕ್ಕೆ ಬೇಸತ್ತ ಸೊಸೆರ್ವೋಳು ಅಳಿಯನಿಂದ ದೇವರಿಗೆ ವಿಚಿತ್ರ ಬೇಡಿಕೆ ಸಲ್ಲಿಸಿದ್ದಾರೆ.
ದೇವರೇ ನನ್ನ ಕಷ್ಟ ದೂರ ಮಾಡು.ನಮ್ಮ ಅತ್ತೆ ಸಾಯಲಿ ಎಂದು ದೇವರಿಗೆ ಹರಕೆ ಹೊತ್ತಿರುವ ಘಟನೆ ರಾಯಬಾಗ ತಾಲೂಕಿನ
ಖಣದಾಳ ಗ್ರಾಮ ದೇವತೆಯಾದ ಶ್ರೀ ಹುಲಿಕಾಂತೇಶ್ವರ ದೇವರಿಗೆ ಹರಿಕೆ ಹೊತ್ತ ಅಪರಿಚಿತ ಮಹಿಳೆ ಎನ್ನಲಾಗುತ್ತಿದೆ.
ಖಣದಾಳ ಗ್ರಾಮ ದೇವರ ಹುಂಡಿಯಲ್ಲಿ
100 ರೂ ಹಾಗೂ 10 ರೂ ಮುಖಬೆಲೆಯ ನೋಟಿನ ಒಳಗಡೆ ಬಿಳಿಹಾಳೆಯ ಮೇಲೆ ಬರವಣಿಗೆ ಶನಿವಾರ ಪತ್ತೆಯಾಗಿದೆ.
ಮುಂದಿನ ವರ್ಷದ ಜಾತ್ರೆ ಬರುವ ಮುಂಚೆ ನಮ್ಮ ಅತ್ತೆ ಸಾಯಲಿ ಎಂದು ನೋಟಿನ ಜೊತೆ ಚೀಟಿ ಅಂಟಿಸಿದ್ದಾರೆ.
ದೇವಸ್ಥಾನ ಕಮೀಟಿಯಿಂದ ಹುಂಡಿಯ ಹಣ ಎಣಿಕೆ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.ಈ ರೀತಿ ಅತ್ತೆ ಕಾಟದಿಂದ ಸೊಸೆ ಹಾಕಿದ್ದಾಳಾ ಅಥವಾ ಅಳಿಯ ಅತ್ತೆ ಸಾಯಲಿ ಎಂದು ಹುಂಡಿಯಲ್ಲಿ ಬರೆದು ಹಾಕಿದ್ದಾನೆ ಎಂಬದು ಇದೀಗ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.