ಸುದ್ದಿ ಕನ್ನಡ ವಾರ್ತೆ

ಕೊಳ್ಳೇಗಾಲ-: ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಮತ್ತು ಏಕಾಗ್ರತೆಯಿಂದ ಓದಿದರೆ ಯಶಸ್ಸು ಲಭಿಸುತ್ತದೆ ಎಂದು ಕೊಳ್ಳೇಗಾಲ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ವಾಸು ಬಿ ಎಸ್ ತಿಳಿಸಿದರು.

ಕೊಳ್ಳೇಗಾಲ ತಾಲೂಕಿನ ಜಕ್ಕಳ್ಳಿ ಶಾಲೆಯಲ್ಲಿ,ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ರೋಟರಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಬೆಂಗಳೂರು ಮಾನ್ಯತಾ, ರೋಟರಿ ಬೆಂಗಳೂರು ಅಬ್ಬಿಗೆರೆ, ಕೆ.ಸಿ.ಸಿ ಪ್ರೈವೇಟ್ ಲಿಮಿಟೆಡ್, ಟ್ಯಾಗ್ ಅನ್ಲಿಮಿಟೆಡ್ ಮತ್ತು ಬಿ. ಆರ್. ಟಿ.ಹುಲಿ ಸಂರಕ್ಷಿತ ಪ್ರದೇಶ,ಚಾಮರಾಜನಗರ, ವನ್ಯಜೀವಿ ವಲಯ ಕೊಳ್ಳೇಗಾಲ ಇವರ ಸಹಯೋಗದಲ್ಲಿ ಆಯೋಜಿಸಿದ್ದ“ನಮ್ಮೂರ ಶಾಲೆ – ಬಳಪ” ಕಾರ್ಯಕ್ರಮವನ್ನುಕೊಳ್ಳೇಗಾಲ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ವಾಸು ಬಿ ಎಸ್ . ಉದ್ಘಾಟಿಸಿ ಮಾತನಾಡಿ .ಕರಳಕಟ್ಟೆ, ಜಕ್ಕಳ್ಳಿ, ಅರೇಪಾಳ್ಯ, ಎರೆಕಟ್ಟೆ ಹಾಗೂ ಹಿತ್ತಲದೊಡ್ಡಿ ಶಾಲೆಗಳ ಮತ್ತು ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಮಕ್ಕಳು ಸೇರಿದಂತೆ ಒಟ್ಟು 236 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಗ್, ನೋಟ್ ಬುಕ್ ಲೇಖನ ಸಾಮಗ್ರಿಗಳನ್ನು ವಿತರಿಸಲಾಗಿದ್ದು, ಇವುಗಳ ಸದ್ಬಳಕೆ ಮಾಡಿಕೊಂಡು ಉತ್ತಮ ಕಲಿಕೆಯೊಂದಿಗೆ ಹೆಚ್ಚು ಅಂಕಗಳಿಸಬೇಕೆಂಬ ಆಸೆಯು ನಿಮ್ಮ ಭವಿಷ್ಯದ ಗುರಿಗೆ ದಾರಿಯಾಗಲಿ ಎಂದು ತಿಳಿಸಿದರು. ರಾಮಯ್ಯ ವಿಶ್ವವಿದ್ಯಾಲಯ ಬೆಂಗಳೂರು ರವರು, ಗ್ರಾಮೀಣ ಮತ್ತು ಕಾಡಂಚಿನ ಶಾಲೆಗಳನ್ನು ಗುರುತಿಸಿ, ಶಿಕ್ಷಣಕ್ಕೆಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಪ್ರಶಂಸಿಸಿದರು.

ಫಾದರ್ ಪೌಲ್ ಮಾತನಾಡಿ ಇಂತಹ ಕಾರ್ಯಕ್ರಮಗಳು,ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಮುದಾಯದ ಜನರಿಗೆ ಸಕಾರಾತ್ಮಕ ಪ್ರಭಾವ ಬೀರಿದ್ದು, ಸಮಾನತೆ ಹಾಗೂ ಶಿಕ್ಷಣದ ಮಹತ್ವದ ಕುರಿತು ಜಾಗೃತಿ ಮೂಡಿಸಿದೆ ಮತ್ತು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಹಾಗೂ ನಿಸ್ವಾರ್ಥ ಮನಸ್ಸಿನಿಂದ ಕಾರ್ಯಕ್ರಮವನ್ನು ಆಯೋಜಿಸಿರುವ ಎಲ್ಲರನ್ನೂ ಪ್ರಶಂಸಿದರು.
ಕಾರ್ಯಕ್ರಮದ ಮುಖ್ಯಸ್ಥರಾದ ಡಾ. ದಾಮೋದರ್ ನಾಯಕ್ ಎ ಅವರು, “ಈ ಕಾರ್ಯಕ್ರಮವು ಶಿಕ್ಷಣ ಹಾಗೂ ಸೇವೆಗಳ ಮೂಲಕ ಗ್ರಾಮೀಣ ಮತ್ತು ಗಿರಿಜನ ಸಮುದಾಯಗಳನ್ನು ಉತ್ತೇಜಿಸುವ ನಮ್ಮ ನಿರಂತರ ಬದ್ಧತೆಯ ಭಾಗವಾಗಿದೆ. ‘ನಮ್ಮೂರ ಶಾಲೆ – ಬಳಪ’ ಪ್ರತಿಯೊಬ್ಬ ಮಗುವಿಗೂ ಅಗತ್ಯವಾದ ಜ್ಞಾನ ಮತ್ತು ಆರೈಕೆ ದೊರಕುವಂತೆ ಮಾಡುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಸಂಯುಕ್ತ ಪ್ರಯತ್ನವು ಸೇವೆ ವಂಚಿತ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ವಿಶ್ವವಿದ್ಯಾಲಯದ ನಿಸ್ವಾರ್ಥ ಸೇವೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

ರೋಟ ರಾಕ್ಟ್ ಕ್ಲಬ್ ಅಧ್ಯಕೆ
ಕಾರ್ಕಲಾ ವೆನ್ನೆಲ್ಲಾ ಮಾತನಾಡಿ, ವಿದ್ಯಾರ್ಥಿಗಳು ಬೇರೆ ಕಡೆ ಗಮನ ಹರಿಸದೆ, ವಿದ್ಯಾಭ್ಯಾಸದ ಕಡೆ ಮನಸ್ಸನ್ನು ಕೇಂದ್ರೀಕರಿಸಬೇಕು ಹಾಗೂ ಮೊಬೈಲ್ ಮತ್ತು ಟಿವಿ ಯಿಂದ ಆದಷ್ಟು ದೂರವಿದ್ದು, ಉತ್ತಮ ಶಿಕ್ಷಣ ಪಡೆಯುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೋಟ ಮತ್ತು ಮನೋರಂಜನ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.
ಈ ಕಾರ್ಯಕ್ರಮದ ನೇತೃತ್ವವನ್ನು ಸಹ ಪ್ರಾಧ್ಯಾಪಕರಾದ ಡಾ. ಪರಶುರಾಮನ್ ಹಾಗೂ ಉಪ ವ್ಯವಸ್ಥಾಪಕರಾದ ಶಿವರಾಜ್ ಕುಮಾರ್ ಎಂ.ಬಿ. ವಹಿಸಿದ್ದರು. ರೋಟರಾಕ್ಟ್ ನ ವತಿಯಿಂದ. ಮಹಮದ್ ಬಿಲಾಲ್, ಅಲ್ಮಾ ಖಾನ್, ಯಶವಂತ್ ಗೌಡ ಎಸ್.ಎ. ಶ್ರೀಜಾ, ಹರ್ಷಿತ, ಮೋಹಿತ್ ಪಾಂಡೆ, ಜೋಶ್ನಾ, ತೇಜಸ್, ಅಲೋಕ್, ಶ್ರೀಯುಕ್ತ, ವಿರಾಜ್,
ಯಶವಂತ,ಪೂರ್ಣಚಂದ್ರ, ಪ್ರತಾಪ್, ಚರಣ್ ರಾಜ್,ದಾನೇಶ್ವರಿ, ಹಾಗೂ ಇತರ ಪದಾಧಿಕಾರಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, ಭವಿಷ್ಯದಲ್ಲಿಯೂ ಇಂತಹ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು. ಮುಖ್ಯ ಶಿಕ್ಷಕಿ ಕುಮಾರಿ, ಲಕ್ಷ್ಮಿ, ರಾಜು, ರಂಗರಾಜು, ಮಹೇಶ್, ಗಸ್ತು ಅರಣ್ಯಪಾಲಕರಾದ ಸುನಿಲ್ ಬಸಪ್ಪ ಬೆಳವಿ, ಸಂಜುನಾಥ ಆಯಟ್ಟಿ, ರಾಜು ಎಸ್, ಅರಣ್ಯ ವೀಕ್ಷಕ ಆಕಾಶ್ ಸೋಪಾನ ಜೋಷಿ , ಗ್ರಾಮಸ್ಥರು ಮತ್ತು ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ವರದಿ ಎಸ್.ಪುಟ್ಟಸ್ವಾಮಿಹೊನ್ನೂರು ಚಾಮರಾಜನಗರ ಜಿಲ್ಲೆ