ಸುದ್ದಿ ಕನ್ನಡ ವಾರ್ತೆ

ಚಾಮರಾಜನಗರ : ಕಾರಾಗೃಹದಲ್ಲಿ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ನಡೆದ 77ನೇ ಗಣರಾಜ್ಯೋತ್ಸವ ಪ್ರಯುಕ್ತ ಮನಃಪರಿವರ್ತನ ಗೀತೆಗಳ ಗಾಯನ ಕಾರ್ಯಕ್ರಮ. .
ಚಾಮರಾಜನಗರದ ಜಿಲ್ಲಾ ಕಾರಾಗೃಹದಲ್ಲಿ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ನಡೆದ 77ನೇ ಗಣರಾಜ್ಯೋತ್ಸವ ಪ್ರಯುಕ್ತ ಮನಃಪರಿವರ್ತನ ಗೀತೆಗಳ ಗಾಯನ ಕಾರ್ಯಕ್ರಮವನ್ನುಉದ್ಯಮಿ ಹಾಗೂ ಸಮಾಜಸೇವಕ ಶ್ರೀನಿಧಿ ಕುದರ್ ಉದ್ಘಾಟಿಸಿ ಮಾತನಾಡಿದ ಅವರು ಅನಿವಾರ್ಯ ಕಾರಣಗಳಿಂದ ಕೆಲವರು ಒಂದಲ್ಲ ಒಂದು ರೀತಿಯ ತಪ್ಪುಗಳನ್ನು ಮಾಡಿ ಶಿಕ್ಷೆಗೆ ಗುರಿಯಾಗಿರುತ್ತಾರೆ, ಎಲ್ಲರೂ ಕಾನೂನು ಅರಿವಿನ ಬಗ್ಗೆ ತಿಳುವಳಿಕೆ ಹೊಂದಿದ್ದರೆ ತಪ್ಪು ಸಂಭವಿಸುವ ಸಾಧ್ಯತೆ ಕಡಿಮೆ ಆಗಿರುತ್ತದೆ, ಹೀಗಾಗಿ ವಿಚಾರಣಾದೀನ ಬಂದಿಗಳು ತಮ್ಮ ಸನ್ನಡತೆಯಿಂದ ಬಿಡುಗಡೆ ಹೊಂದಿ ಕುಟುಂಬ ಹಾಗೂ ಸಮಾಜದೊಂದಿಗೆ ಸಾಮರಸ್ಯ ಜೀವನ ನಡೆಸಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್. ಪಿ. ಬಾಲಸುಬ್ರಮಣ್ಯಂ ಗಾನಗಂಧರ್ವ ವೇದಿಕೆಯಿಂದ ಮನಃಪರಿವರ್ತನೆ ಗೀತೆಗಳು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಕಾರಾಗೃಹದ ಅದಿಕ್ಷಕ ಶಿವಕುಮಾರ್ ಎಂ.ಎಸ್. ಜೈಲರ್ ಗಳಾದ ಡಿ. ಆರ್. ಶಶಿಧರ ಸಹಾಯಕ ಜೈಲರ್ ಗಳಾದ ಉತ್ತಮ ತಳ್ಳಿಮಣಿ, ಮಾದೇಗೌಡ, ಸೇರಿದಂತೆ ಸಿಬ್ಬಂದಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್ ಪಿ ಬಿ ಸಂಘದ ಪ್ರಧಾನ ಕಾರ್ಯದರ್ಶಿ ಜೋಸೆಫ್ ಎನ್, ಉಪಾಧ್ಯಕ್ಷ ವಸಂತು ಬಂಗಾರು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವಿ ರಾಜೇಂದ್ರ ನಾಯಕ್, ತಾಲೂಕ ಅಧ್ಯಕ್ಷ ಸಂತೋಷ್ ಕುಮಾರ್ ಜಿಲ್ಲಾ ಸಂಚಾಲಕ ರಾಘವೇಂದ್ರ, ತಾಲೂಕು ಉಪಾಧ್ಯಕ್ಷ ಸುಂದರ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ರಮೇಶ್ ನಾಯಕ, ಸಹ ಕಾರ್ಯದರ್ಶಿ ರಘು ಕುವೆಂಪು ಕನ್ನಡ ಕಲಾ ರಕ್ಷಣಾ ವೇದಿಕೆ ಅಧ್ಯಕ್ಷ ಲಿಂಗರಾಜು ಎಸ್. ಪಿ.ಬಿ. ಸಂಘದ ಸಂಘಟನಾ ಕಾರ್ಯದರ್ಶಿ ಬಂಗಾರು, ಪ್ರಿನ್ಸಿಪಾಲ್ ರಂಗಸ್ವಾಮಿ, ಎಸ್‌ಟಿಬಿ ಸಂಘದ ಅಧ್ಯಕ್ಷರಾದ ಶಿವಣ್ಣ ಮಂಗಲ ಹೊಸೂರು ಸೇರಿದಂತೆ ಇತರರು ಇದ್ದರು. ವರದಿ ಎಸ್.ಪುಟ್ಟಸ್ವಾಮಿಹೊನ್ನೂರು ಚಾಮರಾಜನಗರ ಜಿಲ್ಲೆ