ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ : ಎಸ್ಎಂ ಕೃಷ್ಣ ಅವರ ನಿಧನದ ವಾರ್ತೆ ಕೇಳಿ ಅತ್ಯಂತ ದುಃಖಿತನಾಗಿದ್ದೇನೆ. ಎಸ್.ಎಂ.ಕೃಷ್ಣ ಅವರು ತೀರ್ಥಹಳ್ಳಿ ತಾಲೂಕಿನ ಅಳಿಯಂದಿರು, ತೀರ್ಥಹಳ್ಳಿ ತಾಲೂಕಿನ ಕುಡು ಮಲ್ಲಿಗೆಯಲ್ಲಿ ಅವರ ಪತ್ನಿ ಪ್ರೇಮಕ್ಕ ಹುಟ್ಟಿದ ಊರು, ಹಾಗಾಗಿ ತೀರ್ಥಹಳ್ಳಿಯ ಬಗ್ಗೆ ವಿಶೇಷವಾಗಿ ತೀರ್ಥಹಳ್ಳಿಯ ಪ್ರತಿನಿಧಿಯಾದ ನನ್ನ ಬಗ್ಗೆ ಮಮಕಾರವಿತ್ತು ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

 

ನಾನು ಯಾವಾಗಲೂ ಅವರ ಮನೆಗೆ ಹೋದಾಗ ಗೌರವಿಸುತ್ತಿದ್ದರು. ನಮ್ಮ ಕಾಮಗಾರಿಗಳನ್ನ ಆದಷ್ಟೂ ಮಂಜೂರು ಮಾಡಿಕೊಡುತ್ತಿದ್ದರು.
ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲರ ನೆನಪಿನಲ್ಲಿ ಅವರು ಉಳಿಯುವಂತ ಕೆಲಸ ಮಾಡಿದ್ದಾರೆ.
ವಿಶೇಷವಾಗಿ ಬೆಂಗಳೂರನ್ನ ಸಿಂಗಾಪುರ ಮಾಡಬೇಕು ಎಂಬುದಾಗಿ ಕನಸನ್ನ ಹೊತ್ತಿದ್ದರು.

ಆ ನಿಟ್ಟಿನಲ್ಲಿ ಐಟಿ-ಬಿಟಿ ಕಂಪನಿಗಳನ್ನ ತಂದು ಅಭಿವೃದ್ಧಿ ಮಾಡಿದವರು.ಕೇಂದ್ರದಲ್ಲೂ ವಿವಿಧ ಹುದ್ದೆಯನ್ನು ಅಲಂಕರಿಸಿದವರುಆ ನಿಟ್ಟಿನಲ್ಲಿ ಸಜ್ಜನ ರಾಜಕಾರಣಿ ಎನಿಸಿಕೊಂಡವರು ಎಂದು ತಿಳಿಸಿದ್ದಾರೆ.

 

ಸೌಮ್ಯ ಸ್ವಭಾವದ ಅತ್ಯಂತ ಸುಸಂಸ್ಕೃತ ನಡವಳಿಕೆಯ ಎಸ್.ಎಂ.ಕೃಷ್ಣ ಅವರನ್ನು ಕಳೆದುಕೊಂಡು ರಾಜ್ಯ ಬಡವಾಗಿದೆ. ಅವರ ಕುಟುಂಬದವರಿಗೆ ದುಃಖವನ್ನ ಬರಿಸುವ ಶಕ್ತಿ ಭಗವಂತ ಕೊಡಲಿ ಎಂದು ಶಾಸಕ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದಾರೆ.