ಸುದ್ದಿಕನ್ನಡ ವಾರ್ತೆ
ಬೆಟಗೇರಿ:ಗ್ರಾಮದೇವತೆ ದ್ಯಾಮವ್ವದೇವಿ ಮಹಾನ ಆದಿಶಕ್ತಿದೇವಿಯಾಗಿದ್ದಾಳೆ. ತನ್ನಲ್ಲಿ ಬಂದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ ಎಂದು ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಹೇಳಿದರು.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಪೂಜ್ಯರ ಉತ್ತರಾಧಿಕಾರಿಗಳಿಗೆ ಸನ್ಯಾಸ ದೀಕ್ಷಾ ಮತ್ತು ಶಿಷ್ಯ ಸ್ವೀಕಾರ ಸಮಾರಂಭ ಮುಂದಿನ ತಿಂಗಳು ಫೆ.25 ಮತ್ತು 26 ರಂದು ಜರುಗಲಿದೆ ಇದರ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಕರ್ಮ ಸಮುದಾಯದ ಸಕಲರಿಗೂ ಆಹ್ವಾನ ನೀಡುವ ಸಲುವಾಗಿ ಬೆಟಗೇರಿಗೆ ಜ.10ರಂದು ಶ್ರೀಗಳ ಭೇಟಿ, ಪಾದಪೂಜೆ, ಪೂರ್ವಭಾವಿ ಸಭೆಯ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ನಮ್ಮ ದೇಶ, ಕನ್ನಡ ನಾಡು ಭವ್ಯ ಪರಂಪರೆ ಹೊಂದಿದೆ. ಇಂದಿನ ಪ್ರತಿಯೊಬ್ಬ ಯುವಕರು ನಮ್ಮ ದೇಶ, ನಾಡು, ನುಡಿ, ಕಲೆ, ಸಂಸ್ಕøತಿ, ಸಂಸ್ಕಾರ, ಸಂಪ್ರದಾಯವನ್ನು ಮೈಗೂಡಿಸಿಕೊಳ್ಳಬೇಕು. ಭವ್ಯ ಪರಂಪರೆ, ಸಂಪ್ರದಾಯ, ಸಂಸ್ಕøತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗಬೇಕು. ನಮ್ಮ ನಾಡಿನಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು ಎಂದು ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಅಭಿಪ್ರಾಯಿಸಿದರು.

ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ದೇವಾಲಯದ ಸಭಾಂಗಣದಲ್ಲಿ ಜ.11ರಂದು ಸ್ಥಳೀಯ ವಿಶ್ವಕರ್ಮ ಸಮಾಜದ ಹಲವಾರು ಜನ ಭಕ್ತರಿಂದ ಆಗಮಿತ ಶ್ರೀಗಳ ಪಾದಪೂಜೆ ಕಾರ್ಯಕ್ರಮ ನಡೆದ ಬಳಿಕ ಸಿಹಿ ಉಪಹಾರ ವಿತರಣೆ ಕಾರ್ಯಕ್ರಮ ಜರುಗಿತು.

ಸ್ಥಳೀಯ ಮುಖಂಡ ಲಕ್ಷ್ಮಣ ಸೋಮಗೌಡ್ರ, ಶಿವಾಜಿ ನೀಲಣ್ಣವರ, ವಿಶ್ವನಾಥ ಶೀಗಿಹಳ್ಳಿ, ರಾಜು ಪತ್ತಾರ, ಸುರೇಶ ಬಡಿಗೇರ, ಬಸವರಾಜ ಬಡಿಗೇರ, ಉಮೇಶ ಬಡಿಗೇರ, ಗುಳಪ್ಪ ಪಣದಿ, ಪರಸಪ್ಪ ಬಡಿಗೇರ, ಪ್ರವೀಣ ಪತ್ತಾರ, ಸಂತೋಷ ಬಡಿಗೇರ, ಭೀಮಶಿ ಬಡಿಗೇರ, ಶಿವು ನಾಯ್ಕರ, ಪುಂಡಲೀಕ ಪತ್ತಾರ, ಕಾಳಪ್ಪ ಪತ್ತಾರ, ಮಂಜು ಪತ್ತಾರ, ಮಹಾಂತೇಶ ಬಡಿಗೇರ ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ದೇವಾಲಯದ ಅರ್ಚಕರು, ಗೋಕಾಕ ವಿಶ್ವಕರ್ಮ ಸಮಾಜದ ಮುಖಂಡರಾದ ಸುರೇಶ ಪತ್ತಾರ, ವಾಸು ಪತ್ತಾರ, ಅನಂತ ಸತ್ತಿಗೇರಿ, ಬಸು ಪತ್ತಾರ, ಶಿವು ಪತ್ತಾರ, ಸ್ಥಳೀಯ ರಾಜಕೀಯ ಮುಖಂಡರು, ಗಣ್ಯರು, ವಿಶ್ವಕರ್ಮ ಸಮಾಜದ ಹಿರಿಯ ನಾಗರಿಕರು, ಯುವಕರು, ಸ್ಥಳೀಯರು, ಮತ್ತೀತರರು ಇದ್ದರು.