ಸುದ್ದಿ ಕನ್ನಡ ವಾರ್ತೆ

ಯಳಂದೂರು :ಜಿಲ್ಲಾ ಪಂಚಾಯತಿ ತಾಂತ್ರಿಕ ಉಪ ವಿಭಾಗ ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಚಂದ್ರಶೇಖರ್ ಮೂರ್ತಿ ಸಿ ಸಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು. ಯಳಂದೂರು, ಪಟ್ಟಣದ ಜಿಲ್ಲಾ ಪಂಚಾಯತಿ ತಾಂತ್ರಿಕ ಉಪ ವಿಭಾಗ ಕಚೇರಿಗೆ ತೆರಳುವ ರಸ್ತೆಗೆ 2.50 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು ಕಚರಿಗೆ ತೆರಳುವ ರಸ್ತೆ ಅನೇಕ ವರ್ಷಗಳಿಂದ ಹಾಳಗಿದ್ದು ವಸತಿಗೃಹದಲ್ಲಿ ವಾಸ ಮಾಡುವ ಸರ್ಕಾರಿ ನೌಕರರಿಗೆ,ಕಚೇರಿಗೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳಿಗೆ ಇದರಿಂದ ತುಂಬಾ ತೊಂದರೆಯಾಗಿದ್ದು ಇವಾಗ ಕಾಮಗಾರಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತಿ ತಾಂತ್ರಿಕ ಉಪ ವಿಭಾಗ ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಚಂದ್ರಶೇಖರ್ ಮೂರ್ತಿ ರವರು ಆಗಮಿಸಿ ಕಾಮಗಾರಿ ಪರಿಶೀಲನೆ ನಡೆಸಿ ನಮ್ಮ ಕಚೇರಿಗೆ ತೆರಳುವ ಸಿ ಸಿ ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡುವ ಮೂಲಕ ಉತ್ತಮ ರಸ್ತೆ ನಿರ್ಮಿಸಲು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಮತ್ತು ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕಬೇಕೆಂದು ಸೂಚನೆ ನೀಡಿದರು .

ಈ ಸಂದರ್ಭದಲ್ಲಿ ಕಿರಿಯ ಇಂಜಿನಿಯರ್ ಮಹದೇವ್, ಮಹೇಶ್, ಪಟ್ಟಣ ಪಂಚಾಯತಿ ಸದಸ್ಯರಾದ ಮಹೇಶ್, ಗುತ್ತಿಗೆದಾರರು ಹಾಜರಿದ್ದರು. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಚಾಮರಾಜನಗರ ಜಿಲ್ಲೆ