ಸುದ್ಧಿಕನ್ನಡ ವಾರ್ತೆ
ಬೆಟಗೇರಿ:ಶ್ರೀದೇವಿಯ ಮೇಲೆ ನಂಬಿಕೆ ಇಟ್ಟು ನಡೆದುಕೊಂಡವರ ಇಷ್ಟಾರ್ಥಗಳನ್ನು ಇಡೇರಿಸುತ್ತಾಳೆ. ಶ್ರೀದ್ಯಾಮವ್ವದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಡಿ.12 ರಂದು ಮಾತನಾಡಿ, ಬೆಟಗೇರಿ ಗ್ರಾಮದಲ್ಲಿ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತನು, ಮನ, ಧನ ಮೂಲಕ ಸ್ಥಳೀಯರು ನೀಡುತ್ತಿರುವ ಸಹಾಯ, ಸಹಕಾರ ಶ್ಲಾಘನೀಯವಾಗಿದೆ ಎಂದರು.
ಶುಕ್ರವಾರದಂದು ಮುಂಜಾನೆ 10.30 ಗಂಟೆಗೆ ಇಲ್ಲಿಯ ದ್ಯಾಮವ್ವದೇವಿ ದೇವರ ದೇವಸ್ಥಾನದಲ್ಲಿರುವ ಶ್ರೀದೇವಿಯ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಶೃಂಗಾರಗೊಳಿಸುವ, ಉಡಿತುಂಬುವದು, ಪುರಜನರಿಂದ ಪೂಜೆ, ನೈವೇದ್ಯ ಸಮರ್ಪಿಸುವದು, ಮಹಾಪ್ರಸಾದ ಸಂಭ್ರಮದಿಂದ ಜರುಗಿದ ಬಳಿಕ ಶ್ರೀದೇವಿಯ ಪ್ರಸಕ್ತ ವರ್ಷದ ದೀಪೋತ್ಸವ, ಕಾರ್ತಿಕೋತ್ಸವ ಸಂಪನ್ನಗೊಂಡಿತು.
ಸ್ಥಳೀಯ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯ, ಸುರೇಶ ವಡೇರ, ಮುತ್ತೆಪ್ಪ ವಡೇರ ಸಮ್ಮುಖ, ಶಿವಾಜಿ ನೀಲನ್ನವರ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿಯ ಕಾರ್ತಿಕೋತ್ಸವಕ್ಕೆ ಅನ್ನಪ್ರಸಾದ ಸೇವೆ ನೆರವೇರಿಸಿದ ಬಸವಂತ ಕೋಣಿ ಸೇರಿದಂತೆ ತನು, ಮನ, ಧನ ಸಹಾಯ, ಸಹಕಾರ ನೀಡಿದ ಗಣ್ಯರನ್ನು ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ವತಿಯಿಂದ ಈ ವೇಳೆ ಸತ್ಕರಿಸಿದರು.
ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಲಕ್ಷ್ಮಣ ಸೋಮಗೌಡ್ರ, ರಾಮಚಂದ್ರ ಬಡಿಗೇರ, ಬಸಪ್ಪ ಮೇಳೆನ್ನವರ, ಸದಾಶಿವ ಕುರಿ, ಸುಭಾಷ ಕರೆನ್ನವರ, ಬಸವರಾಜ ಪಣದಿ, ಶಿವರಾಜ ಪತ್ತಾರ, ವಿಠಲ ಕೋಣಿ, ಸುರೇಶ ಬಡಿಗೇರ, ವಿಠಲ ಬಡಿಗೇರ, ಮಹಾಂತೇಶ ಬಡಿಗೇರ, ಸಂತೋಷ ಬಡಿಗೇರ, ಪರಶುರಾಮ ಬಡಿಗೇರ, ಪ್ರಕಾಶ ಬಡಿಗೇರ, ಮಹೇಶ ಪತ್ತಾರ, ಈಶ್ವರ ಬಡಿಗೇರ, ಗುಳಪ್ಪ ಪಣದಿ, ಸ್ಥಳೀಯ ಹರ, ಗುರು, ಚರಮೂರ್ತಿಗಳು,ಗಣ್ಯರು, ಹಿರಿಯ ನಾಗರಿಕರು, ಇಲ್ಲಿಯ ಶ್ರೀದೇವಿ ದೇವಾಲಯ ಅರ್ಚಕರು, ದ್ಯಾಮವ್ವದೇವಿ ಕಾರ್ತಿಕೋತ್ಸವ ಆಚರಣಾ ಸಮಿತಿ ಸದಸ್ಯರು, ಭಕ್ತರು, ಸ್ಥಳೀಯರು ಇದ್ದರು.
