ಸುದ್ಧಿಕನ್ನಡ ವಾರ್ತೆ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ಕಾರ್ತಿಕೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು ರಂಗೋಲಿ ಮೂಲಕ ಓಂ ಅಕ್ಷರದಲ್ಲ್ಲಿ ಶ್ರೀದೇವಿಯ ತ್ರೀಶೂಲ ಚಿತ್ರ ಬಿಡಿಸಿ, ಅದರಲ್ಲಿ ಚಿಕ್ಕ ದೀಪ ಹಚ್ಚಿ ಸಂಭ್ರಮಿಸಿದರು. ಇದು ನೋಡುಗರಲ್ಲಿ ಆಕರ್ಷಣಿಯವಾಗಿ ಕಾಣುತ್ತಿತ್ತು.
