ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ- ಬೆಂಗಳೂರಿನ ಕೇಂದ್ರ ಬಸವ ಸಮಿತಿ ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮಜಿಯವರ ಐಕ್ಯ ಕ್ಷೇತ್ರವಾದ ಬೈಲಹೊಂಗಲದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಅತ್ಯುತ್ತಮ ಸ್ಥಾನಗಳಿಸಿದ ಖಾನಾಪುರ ತಾಲ್ಲೂಕಿನ ಪಾರಿಶ್ವಾಡ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ಕವಯಿತ್ರಿ ಶ್ರೀಮತಿ ಶಿಂಗಮ್ಮ ವಿರೂಪಾಕ್ಷಯ್ಯ ಕೋರಿಮಠ (ಗಂಗಾಧರಮಠ) ಅವರಿಗೆ ಎಂ. ಕೆ. ಹುಬ್ಬಳ್ಳಿ ಪಟ್ಟಣದ ರಾಣಿ ಚೆನ್ನಮ್ಮ ನಗರದಲ್ಲಿರುವ ಅವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ ಅವರು ಗೌರವಿಸಿ, ಅಭಿನಂದಿಸಿದರು.
ಖಾನಾಪುರ ತಾಲ್ಲೂಕಿನ ಲಕ್ಕೆಬೈಲ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ಜಗದೀಶ ಶಿವಬಸಯ್ಯ ಗಂಗಾಧರಮಠ, ಶ್ರೀ ಕಲ್ಮೇಶ್ವರ ಪ್ರೌಢಶಾಲೆಯ ನಿವೃತ್ತ ಆಂಗ್ಲ ಭಾಷೆಯ ಶಿಕ್ಷಕರಾದ ಶ್ರೀ ಶಿವಬಸಯ್ಯ ಶಂಕರಯ್ಯ ಗಂಗಾಧರಮಠ ಉಪಸ್ಥಿತರಿದ್ದರು.
