ಸುದ್ಧಿಕನ್ನಡ ವಾರ್ತೆ
ಬೆಟಗೇರಿ:ಗ್ರಾಮದ ಅಭಿವೃದ್ಧಿಗೆ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಕರ ವಸೂಲಿಗಾರ ಸುರೇಶ ಬಾಣಸಿ ಹೇಳಿದರು.

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸಹಯೋಗದಲ್ಲಿ ಮಂಗಳವಾರ ಡಿ.9ರಂದು ನಡೆದ ಕರ ವಸೂಲಿ ಅಭಿಯಾನದ ಪ್ರಯುಕ್ತ ಬೆಟಗೇರಿ ಗ್ರಾಮ ಪಂಚಾಯ್ತಿ ವತಿಯಿಂದ ಸ್ಥಳೀಯ ಗ್ರಾಪಂ ವ್ಯಾಪ್ತಿಯ ಬೆಟಗೇರಿ ಗ್ರಾಮದ ಮನೆ, ಅಂಗಡಿ, ಮುಂಗಟ್ಟುಗಳಿಗೆ ಅವರು ತೆರಳಿ ಕರ ಪಾವತಿ(ವಸೂಲಿ)ಮಾಡಿಕೊಂಡು ಮಾತನಾಡಿ, ಸ್ಥಳೀಯರು ಕರ ಪಾವತಿಸಿ, ಗ್ರಾಮ ಪಂಚಾಯತ ಸಹಯೋಗದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕೆಂದರು.

ಸ್ಥಳೀಯರಲ್ಲಿ ಮನವಿ:ಗೋಕಾಕ ತಾಪಂ ಇಒ ಪರಶುರಾಮ ಗಸ್ತಿ ಹಾಗೂ ಮೇಲಾಧಿಕಾರಿಗಳ ನಿರ್ದೇಶನದಂತೆ ಕರ ವಸೂಲಿ ಅಭಿಯಾನ ನಿಮಿತ್ಯ ಮಂಗಳವಾರ ಡಿ.9 ರಂದು ಬೆಟಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಮನೆ, ಅಂಗಡಿ, ಮುಂಗಟ್ಟುಗಳಿಗೆ ಗ್ರಾಪಂ ಸಿಬ್ಬಂದಿ ತೆರಳಿ ಕರ ಪಾವತಿಸಿಕೊಳ್ಳುವ ಕಾರ್ಯಕೈಗೊಂಡಿದ್ದಾರೆ. ಗ್ರಾಮದ ಗ್ರಾಮಸ್ಥರು ತಮ್ಮ ಮನೆ, ಅಂಗಡಿ, ಮುಂಗ್ಗಟ್ಟುಗಳ ಹಾಗೂ ಮತ್ತೀತರ ಕರಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಅವರಲ್ಲಿ ಕೊಡಲೇ ಪಾವತಿಸಿಕೊಳ್ಳಬೇಕು ಎಂದು ಇಲ್ಲಿಯ ಗ್ರಾಪಂ ಕಾರ್ಯದರ್ಶಿ ಮಾರುತಿ ತಳವಾರ ಅವರು ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯತ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ, ಮಂಜುನಾಥ ಕಂಬಿ, ಈರಣ್ಣ ದಂಡಿನ, ಶಿವಾನಂದ ಐದುಡ್ಡಿ, ಅರ್ಜುನ ಬೆಟಗೇರಿ, ಸಾಂವಕ್ಕಾ ಹರಿಜನ, ತುಕಾರಾಮ ಕುರಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.