ಸುದ್ಧಿಕನ್ನಡ ವಾರ್ತೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಸ್ಥಳೀಯ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಡಿ.13 ರಂದು ನಡೆಯಲಿವೆ.
ಸುಣಧೋಳಿ ಶ್ರೀ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮೀಜಿ ಸಾನಿಧ್ಯ, ಸ್ಥಳೀಯ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳ ಸಮ್ಮುಖ, ಸ್ಥಳೀಯ ಹಿರಿಯ ನಾಗರಿಕರು, ಗಣ್ಯರು ಮತ್ತು ಇಲ್ಲಿಯ ಮಾರುತಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಡಿ.13 ರಂದು ಬೆಳಿಗ್ಗೆ 7ಗಂಟೆಗೆ ಇಲ್ಲಿಯ ಮಾರುತಿ ದೇವರ ಗದ್ದುಗೆಗೆ ಮಹಾಭಿಷೇಕ ಮಹಾಪೂಜೆ, ಎಲೆ ಪೂಜೆ, ಪುರ ಜನರಿಂದ ಪೂಜೆ, ನೈವೇದ್ಯ ಸಮರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಸಂಜೆ 6ಗಂಟೆಗೆ ಸ್ಥಳೀಯ ಕರಡಿ ಮಜಲು ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಕಾಯಿ ಹಾರಿಸುವದು, ಸಿಹಿ ಹಂಚುವದು, ಕಾರ್ತಿಕ ದೀಪೋತ್ಸವ, ಮದ್ದು ಹಾರಿಸುವ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ದಾನಿಗಳಿಗೆ ಸತ್ಕಾರ ಕಾರ್ಯಕ್ರಮ ನಡೆದ ನಂತರ ಪ್ರಸಕ್ತ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮ ಸಮಾರೊಪಗೊಳ್ಳಲಿದೆ.
ಸಂಗ್ಯಾ ಬಾಳ್ಯಾ ಬೈಲಾಟ: ಬೆಟಗೇರಿ ಗ್ರಾಮದ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ನಿಮಿತ್ಯ ಡಿ.13 ರಂದು ರಾತ್ರಿ 10 ಗಂಟೆಗೆ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿ ಶ್ರೀ ದುರ್ಗಾದೇವಿ ಹೆಣ್ಣು ಮಕ್ಕಳ ನಾಟ್ಯ ಸಂಘದವರಿಂದ ಬೈಲಾಟದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳಲ್ಲಿ ಹೆಣ್ಣು ಮಕ್ಕಳಿ(ನಟ, ನಟಿಯರಿ)ಂದ ಸಂಗ್ಯಾ ಬಾಳ್ಯಾ ಎಂಬ ಸಾಮಾಜಿಕ ಬೈಲಾಟ ಪ್ರದರ್ಶನಗೊಳ್ಳಲಿದೆ.
ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ರಾಜಕೀಯ ಮುಖಂಡರು, ಗಣ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಮಾರುತಿ ದೇವರ ಭಕ್ತರು ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಮಾರುತಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
