ಸುದ್ದಿ ಕನ್ನಡ ವಾರ್ತೆ
ರಾಜ್ಯ ಸರಕಾರ ಆದ್ಯತೆ ಮೇರೆಗೆ ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು.ಹಾಗೆಯೇ ಮೂಲ ಸೌಲಭ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಮತ್ತು ಹಳ್ಳಿಗಳ ಸಂಪರ್ಕ ರಸ್ತೆಗಳ ಸಮಸ್ಯೆ ಉತ್ತರ ಕರ್ನಾಟಕದ ಪ್ರತಿ ಹಳ್ಳಿಯಲ್ಲೂ ಇದೆ.ಈ ಸಮಸ್ಯೆ ಕೂಡಲೇ ಪರಿಹರಿಸಬೇಕು.ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೇ ಮುಂದುವರಿದರೂ ಉದ್ಯೋಗಕ್ಕಾಗಿ ಈ ಭಾಗದ ಯುವಕರು ದೂರದ ಬೆಂಗಳೂರು,ಪುಣೆ, ಮುಂಬಯಿ ನಗರಗಳಿಗೆ ತೆರಳಬೇಕಿದೆ.ಉತ್ತರ ಕರ್ನಾಟಕದಲ್ಲಿ ಎಲ್ಲ ಬಗೆಯ ಮೂಲ ಸೌಕರ್ಯಗಳಿದ್ದು ಅವುಗಳನ್ನು ಸರಿಯಾಗಿ ಬಳಸಿಕೊಂಡು ಐಟಿ ಬಿಟಿ ಕಂಪನಿ ಹಾಗೂ ಬೃಹತ್ ಕೈಗಾರಿಕೆಗಳನ್ನು ಆರಂಭಿಸಬೇಕು.ಅಧಿವೇಶನ ಎಂದು ಒಂದಷ್ಟು ಹಣ ವೆಚ್ಚ ಮಾಡಿ ತೆರಳದೇ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಿ,ಸರಿಯಾದ ಯೋಜನೆ ರೂಪಿಸಬೇಕು. ಕಾಲಮಿತಿಯಲ್ಲಿ ಅಂಥ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೆಲಸವಾಗಬೇಕು.
ಆನಂದ ಯಲ್ಲಪ್ಪ ಕೊಂಡುಗುರಿ.
ಪ್ರಧಾನ ಕಾರ್ಯದರ್ಶಿ,
ಜಾಗತಿಕ ಲಿಂಗಾಯತ ಮಹಾಸಭೆ,ತಾಲೂಕು ಘಟಕ ಬೆಳಗಾವಿ.
