ಸುದ್ದಿ ಕನ್ನಡ ವಾರ್ತೆ

ಹುಣಶ್ಯಾಳ ಪಿ.ವಾಯ್.- ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಪಿ‌.ವಾಯ್. ಗ್ರಾಮದ ಆರೂಢಜ್ಯೋತಿ ಚೈತನ್ಯ ಶಾಲೆಯ ಕೋಚಿಂಗ್ ವಿಭಾಗದ ಶಿಕ್ಷಕ,ಉದಯೋನ್ಮುಖ ಕವಿ,ಬರಹಗಾರ,ಸಂಘಟಕ ಶಿವಾನಂದ ಬಸನಾಯ್ಕ ಪಟ್ಟಿಹಾಳ(ಇಂಚಲ) ಅವರು ನವೆಂಬರ 23 ರಂದು ಬೆಂಗಳೂರು ಕೇಂದ್ರ ಬಸವ ಸಮಿತಿಯಿಂದ ಬೈಲಹೊಂಗಲದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ ಎಂದು
ರಾಜ್ಯ ಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರಾದ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆಯಾದ ಶಿವಾನಂದ ಬಸನಾಯ್ಕ ಪಟ್ಟಿಹಾಳ ಅವರನ್ನು ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು,ಪ್ರಧಾನ ಗುರುಗಳು ಹಾಗೂ ಸಹೋದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಸುಕ್ಷೇತ್ರ ಇಂಚಲ ಸಾಧು ಸಂಸ್ಥಾನ ಮಠದ ಆಡಳಿತಾಧಿಕಾರಿಗಳಾದ ಪೂಜ್ಯ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ ಅವರು ಕವನಗಳು ಚೆನ್ನಾಗಿ ರಚನೆಯಾಗಿವೆ ಆದಷ್ಟು ಶೀಘ್ರವಾಗಿ ಕವನ ಸಂಕಲನ ಬಿಡುಗಡೆಯಾಗುವಂತಾಗಲಿ ಎಂದು ಶುಭ ಕೋರಿದರು.