ಸುದ್ದಿ ಕನ್ನಡ ವಾರ್ತೆ
ಧಾರವಾಡ:ಹಾಸನದಲ್ಲಿ ನವೆಂಬರ್ 2 ರವಿವಾರಂದು ನಡೆದ ಮಾಣಿಕ್ಯ ಪ್ರಕಾಶನದ ದಶಮಾನೋತ್ಸವ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.
ಸಾಹಿತಿ ಎ ಎ ದರ್ಗಾರವರ ಬೆಂದ ಬೆಳಸಿ ಕೃತಿಗೆ ದಿ. ಸಿ ಪಿ ನಾರಾಯಣಾಚಾರ್ಯ ಸ್ಮಾರಕ ದತ್ತಿ – ಕಾವ್ಯ ಮಾಣಿಕ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸರ್ವಾಧ್ಯಕ್ಷರಾದ ಕವಯತ್ರಿ ವಾಣಿ ಶೆಟ್ಟಿ ಮುಂಬಯಿ ಹಾಗೂ ಉದ್ಘಾಟಕರಾದ ಪ್ರಸಿದ್ಧ ಸಾಹಿತಿ ಡಾ.ಕೆ ಎಸ್ ಭಗವಾನ್ ಪ್ರಕಾಶಕಿ ದೀಪಾ ಉಪ್ಪಾರ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ಎಸ್ ಉಪ್ಪಾರ್, ಟಿ ಸತೀಶ್ ಜವರೇಗೌಡಮುಂತಾದ ಪ್ರಮುಖರು ಉಪಸ್ಥಿತರಿದ್ದರು
