ಆನಂದ ಭಾಷ್ಪ
ನಿನ್ನ ಖುಷಿಯಲ್ಲಿ ನಾನು ಇದ್ದೇನೆ
ಅನ್ನೋದು ನೀ ನಕ್ಕಾಗ ಗೊತ್ತಾಗುತಿತ್ತು
ಆದರೆ ನಿನಗೂ ಅಳುಕಿದೆ ಎಂದು
ಗೊತ್ತಾಗದೆ ಹೋಯ್ತು…….
ಯಾಕಂದ್ರೆ ನೀನು ಸದಾ ನಗುತ್ತಲೇ
ಎಲ್ಲವನ್ನೂ ನುಂಗುತ್ತಲೇ ಇದ್ದೇ
ದುಃಖವನ್ನು ಇಂಗುತ್ತಲೇ ಅರಳಿದ್ದೆ
ಕಿರು ಹಾಸ್ಯ, ಖುಷಿ, ಚುಟುಕಿಗೆ
ನಕ್ಕು ಹೊರಹಾಕಿ ಬಿಟ್ಟೆ
ಆದರೆ ನೋವಾದಾಗ ನುಂಗಿ
ಎಲ್ಲವನ್ನೂ ಮರೆಯಲ್ಲಿಯೇ ಇಟ್ಟೆ
ಕಣ್ಣೀರಲ್ಲಾ.. ಪನ್ನೀರು ಅದಕ್ಕೆ
ಆನಂದಭಾಷ್ಪ ಎಂದು ಹೆಸರಿಟ್ಟೆ..
ಕಾವ್ಯ ನಾಮ ಕಾನನದ ಕೋಗಿಲೆ
ರಾಜೇಶ್ ವ ಮೆಂಡಿಗೇರಿ ಬೆಂಗಳೂರು