ಸುದ್ದಿ ಕನ್ನಡ ವಾರ್ತೆ

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಶ್ರೀ ನಿಜಗುಣಿ ಶಿವಯೋಗಿಗಳ ಶ್ರೀ ಮಠದಲ್ಲಿ 100ನೆಯ ವಾರದ ವಚನ ಪ್ರಾರ್ಥನೆ ಹಾಗೂ ವಚನ ಚಿಂತನೆ ಕಾರ್ಯಕ್ರಮವು ಜರುಗಿತು
ನೂರನೆ ವಾರದ ಸಂಭ್ರಮಾಚರಣೆಯ ಪ್ರಯುಕ್ತ ಶ್ರೀ ಅಡವಿಸಿದ್ದೇಶ್ವರ ಮಠದ.ಪರಮ ಪೂಜ್ಯ ಶ್ರೀ ಅಡವೀಶ್ವರ ದೇವರು ತಾರಿಹಾಳ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನವನ್ನು ನೀಡಿದರು ಹಾಗೂ ಶ್ರೀ ನಿಜಗುಣಶಿವಯೋಗಿ ಮಠದ.ಶ್ರೀ ನಿಜಗುಣಿ ದೇವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.

ವಚನ ಪ್ರಾರ್ಥನೆಯನ್ನು ಶ್ರೀಮತಿ ಪಾರ್ವತಿ ಮಠಪತಿ ಅಕ್ಕನವರು ನೆರವೇರಿಸಿದರು,ಶ್ರೀ ಬಿ ಜಿ ವಾಲಿಇಟಗಿ,ಶ್ರೀ ಮಹಾಂತೇಶ ತೋರಣಗಟ್ಟಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು,ಸ್ವಾಗತವನ್ನ ಆನಂದ ಯಲ್ಲಪ್ಪ ಕೊಂಡಗುರಿಯವರು,ಶರಣು ಸಮರ್ಪಣೆಯನ್ನು ಶ್ರೀ ಎನ್ ಪಿ ಉಪ್ಪಿನ ಅವರು ನಿರ್ವಹಿಸಿರು ಕಾರ್ಯಕ್ರಮದ ನಿರೂಪಣೆಯನ್ನು ಪ್ರವೀಣ ರೊಟ್ಟಿ ನಿರ್ವಹಿಸಿದರು ಇದೇ ಸಂದರ್ಭದಲ್ಲಿ ದಿ.ಬೆಳಗಾವಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಬೆಳಗಾವಿ ಇದರ ನಿರ್ದೇಶಕ ಸ್ಥಾನಕ್ಕೆ ನೂತನವಾಗಿ ಅವಿರೋದವಾಗಿ ಆಯ್ಕೆಯಾಗಿರುವ ಗ್ರಾಮದ ಶ್ರೀ ಬಸನಗೌಡ ರುದ್ರಗೌಡ ಪಾಟೀಲ ಅವರನ್ನು ಗುರುಬಸವ ಬಳಗದ ವತಿಯಿಂದ ಸತ್ಕರಿಸಲಾಯಿತು.

ಗುರುವಾರ ದಿನಾಂಕ11/09/2025ರಂದು ಬೆಳಗಾವಿ ಮಹಾನಗರದಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿನಂತಿಸಿ ಕೊಂಡರು.
ಬಾಬುಗೌಡ ಪಾಟೀಲ,ದಯಾನಂದ ಹಂಚಿನಮನಿ,ಶಿವಪುತ್ರ ಇಟಗಿ,ಸಿ ಎಮ್ ಹುಬ್ಬಳ್ಳಿ,ಪ್ರಕಾಶ ಜಪ್ತಿ,ಅಶೋಕ ಪಾಶ್ಚಾಪುರ,ನಾಗನಗೌಡ ಹಾದಿಮನಿ,ಜಾಗತಿಕ ಲಿಂಗಾಯತ ಮಹಾಸಭಾ,ಗುರು ಬಸವ ಬಳಗ,ಶ್ರೀ ನಿಜಗುಣ ಸೇವಾ ಸಮಿತಿ ಇವುಗಳ ಪದಾಧಿಕಾರಿಗಳು ಸದಸ್ಯರು ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.