ಸುದ್ದಿ ಕನ್ನಡ ವಾರ್ತೆ

ಧಾರವಾಡ- ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರಾಗಿ, ಉನ್ನತ ಶ್ರೇಣಿಯ ನಿಜಸಂಶೋಧಕರಾಗಿ, ಕನ್ನಡ ಅಧ್ಯಯನ ಪೀಠದ ದಕ್ಷ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾದರಿ ಕುಲಪತಿಗಳಾಗಿ, ಅನೇಕ ವಿಶಿಷ್ಟ ಯೋಜನೆಗಳ ರೂವಾರಿಗಳಾಗಿ, ಹಲವಾರು ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಸಂಘ- ಸಂಸ್ಥೆಗಳ ನಿರ್ದೇಶಕರಾಗಿ, ಕನ್ನಡ ನಾಡು ನುಡಿ- ಸಾಹಿತ್ಯ, ಸಂಸ್ಕೃತಿಗಳ ಉತ್ಕಟ ಚಿಂತಕರಾಗಿ, ಬಹು ಶಿಸ್ತೀಯ ಅಧ್ಯಯನದ ಬರಹಗಾರರಾಗಿ, ಬಸವಾಭಿಮಾನಿಯಾಗಿ ಅಮರರಾದ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ತನೇ ಪುಣ್ಯ ಸ್ಮರಣೆ ನಿಮಿತ್ತ ಕಲ್ಯಾಣ ನಗರದಲ್ಲಿರುವ ಅವರ ನಿವಾಸಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಭೇಟಿ ನೀಡಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ಸಂದರ್ಭ.

 

ಧಾರವಾಡ ಬಸವ ಸಮಿತಿಯ ಮುಖ್ಯ ಸಂಯೋಜಕರಾದ ಶ್ರೀ ಎಂ. ಜಿ. ಮುಳಕೂರು, ಕೃಷಿ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಶ್ರೀ ಎಚ್.ಕೆ.ಎ.ಆಚಾರ್ಯ ಉಪಸ್ಥಿತರಿದ್ದರು.