ಸುದ್ದಿ ಕನ್ನಡ ವಾರ್ತೆ
ಬಾಗಲಕೋಟೆ:ಗ್ರಾಮದಲ್ಲಿ ಸಂಚರಿಸುವ ಸಾರಿಗೆ ಬಸ್ ಸ್ಟಾಪ್ ಇದ್ದರೂ ನಿಲ್ಲಿಸುತ್ತಿಲ್ಲ ಯಾಕೆ ಎಂದು ಪ್ರಶ್ನೀಸಿದ ಪ್ರಯಾಣಿಕರು ಸಾರಿಗೆ ಬಸ್ ನಿಲ್ಲಿಸಿ ಚಾಲಕನ ಜೊತೆ ವಾದಕ್ಕಿಳಿದ ಘಟನೆ ಗ್ರಾಮದ ಬಸ್ ನಿಲ್ದಾಣದ ಎದುರು ನಡೆಯಿತು. ಇದರಿಂದ ಕೆಲಕಾಲ ಸಂಚಾರಕ್ಕೆ ಅಡೆತಡೆ ಉಂಟಾಯಿತು.
ಇದಕ್ಕೆ ಸಾಥ್ ನೀಡಿದ ಗ್ರಾಮಸ್ಥರು ಕುಳಗೇರಿ ಕ್ರಾಸ್‌ಗೆ ಸ್ಟಾಫ್ ಇಲ್ಲ… ಯಾರು ಹತ್ತಬೇಡಿ… ಎಂದು ಪ್ರಯಾಣ ಕರಿಗೆ ವಾರ್ನಿಂಗ್ ಮಾಡುವ ಡಿ.ಕಂ.ಸಿ ಬಸ್ ಚಾಲಕರು ತಮಗೆ ಬೇಕಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಮದ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ತಮಗೆ ಬೇಕಾದವರನ್ನ ಮಾತ್ರ ಹತ್ತಿಸಿಕೊಂಡು ಕುಳಗೇರಿ ಕ್ರಾಸ್ ಬಸ್ ನಿಲ್ದಾಣದಿಂದ ದೂರದಲ್ಲೇ ಇಳಿಸಿ ಹೋಗುತ್ತಿರುವುದನ್ನ ಕಂಡ ಪ್ರಯಾಣಿಕರು-ಗ್ರಾಮಸ್ಥರು ಬಸ್ ತಡೆದು ಚಾಲಕನ ಜೊತೆ ವಾದ ಮಾಡಿದರು. ಸಾರಿಗೆ ಬಸ್ ನಿಮ್ಮ ಸ್ವಂತದ್ದಾ ಎಂದು ಪ್ರಶ್ನೀಸಿದರು.
ಡಿ.ಕಂ.ಸಿ ಬಸ್ ಚಾಲಕರು ತಮ್ಮ ಬಸ್‌ನಲ್ಲಿ ಪ್ರಯಾಣಿಕರು ಇರದಿದ್ದರೆ ನಿಲ್ದಾಣದಲ್ಲಿ ಕೆಲಕಾಲ ನಿಂತು ಪ್ರಯಾಣಿಕರನ್ನ ಹತ್ತಿಸಿ ಬಸ್ ಭರ್ತಿ ಮಾಡಿಕೊಂಡು ಹೋಗುತ್ತಾರೆ. ಯಾರಾದರೂ ಪ್ರಶ್ನೀಸಿದರೆ ಬಸ್ ಇಳಿದು ಬಂದು ಅವರ ಜೊತೆ ಜಗಳಕ್ಕಿಳಿಯುತ್ತಾರೆ ಎಂದು ಆರೋಪಿಸಿದರು.
ಬಸ್ ಸ್ಟಾಫ್ ಇರದಿದ್ದರೆ ನಿಲ್ಲಿಸುವುದಾದರೂ ಯಾಕೆ? ಎಂದು ಪ್ರಶ್ನಿಸಿದರೆ ಸಹಕರಿಸದೆ ವಾದ ಮಾಡಿ ಪ್ರಯಾಣಿಕರನ್ನೇ ಗದರಿಸುತ್ತಾರೆ. ಬಸ್ ನಿಲ್ದಾಣದ ಹತ್ತಿರ ಬಸ್ ನಿಲ್ಲಿಸದೇ ವೇಗವಾಗಿ ಹೋಗುತ್ತಾರೆ. ಈ ಸಂಬಂದ ಸ್ಥಳಿಯ ನಿಯಂತ್ರಣಾಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಪ್ರಯೋಜನ ಇಲ್ಲದಂತಾಗಿದೆ ಎಂದು ದೂರಿದರು.
ಕುಳಗೇರಿ ಕ್ರಾಸ್ ಮೂಲಕ ಸಂಚರಿಸುವ ಎಲ್ಲ ಸಾರಿಗೆ ಬಸ್ ಸ್ಟಾಫ್ ಇದ್ದರೂ ಸಹ ನಿಲ್ಲಿಸುತ್ತಿಲ್ಲ. ನಿತ್ಯ ಇದೇ ರೀತಿ ಸಾರಿಗೆ ಚಾಲಕರು ಪ್ರಯಾಣಿಕರ ಜೊತೆ ವಾದ ಮಾಡುತ್ತಾರೆ. ಸಂಬಂದಿಸಿದ ಸಾರಿಗೆ ಅಧಿಕಾರಿಗಳು ಇಂತ ಚಾಲಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಾಕ್ಷ್: ಕೆಲವು ಬಸ್‌ಗಳು ಸ್ಟಾಫ್ ಇಲ್ಲ. ಯಾವ ಬಸ್ ನಿಲ್ಲುತ್ತವೆ ಯಾವುದು ಇಲ್ಲ ಎಂಬ ಮಾಹಿತಿ ಪಡೆದು ನಾಳೆಯೇ ತಮಗೆ ತಿಳಿಸುತ್ತೆನೆ. ಹಾಗೊಂದು ವೆಳೆ ಸ್ಟಾಫ್ ಇದ್ದರೂ ನಿಲ್ಲಿಸದಿದ್ದರೆ ಅಂತ ಚಾಲಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೆವೆ. ಕೆಎಸ್‌ಆರ್‌ಟಿಸಿ ಬಾಗಲಕೋಟೆ ವಿಭಾಗ ಸಂಚಾರ ಅಧಿಕಾರಿ ಕೆ ಕೆ ಲಮಾಣಿ.