ಸುದ್ದಿ ಕನ್ನಡ ವಾರ್ತೆ
ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ವ್ಯಾಪ್ತಿಯ ತೀರ್ಥಹಳ್ಳಿ- ಕೊಪ್ಪ ರಸ್ತೆ ಸಂಪರ್ಕಿಸುವ ತುಂಗಾ ಕಮಾನು ಸೇತುವೆ ಮೇಲೆ ಮಳೆ ಬರುವ ವೇಳೆ ಎರಡು ಅಡಿ ನೀರು ಹರಿಯುತ್ತಿದ್ದು ಇದರಿಂದ ಸೇತುವೆ ಮೇಲೆ ಓಡಾಟ ಮಾಡುವವರಿಗೆ ಮಳೆಯ ಸ್ನಾನದ ಜೊತೆಗೆ ಕೊಳಚೆ ನೀರಿನ ಸ್ನಾನ ಕೂಡ ಆಗುತ್ತಿದೆ..
ಪ್ರವಾಸಿ ಮಂದಿರದಿಂದ ಹರಿದು ಬರುವ ನೀರು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ
ಸಣ್ಣ ಮಳೆ ಬಂದರೂ ನೀರು ರಸ್ತೆಯ ಮೇಲೆ ಹರಿದು ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ. ತ್ಯಾಜ್ಯ, ಕೊಳಕು ನೀರು ರಸ್ತೆಯ
ಮೇಲೆ ಹರಿಯುತ್ತಿದ್ದು, ನಡೆದಾಡಲು ಕಷ್ಟಪಡುವಂತಾಗಿದೆ. ಇಲ್ಲಿ ಪಾದಚಾರಿಗಳಿಗೆ ವಾಹನಗಳಿಂದ ಕೊಳಕು ನೀರಿನ ಅಭಿಷೇಕ ಮಾಮೂಲಿ ಎಂಬಂತೆ ಆಗಿದೆ.
ತತ್‌ಕ್ಷಣ ಇಲ್ಲಿ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ರಸ್ತೆಯಿಂದ ಹರಿದು ಬರುವ ನೀರು ಸೇತುವೆ ಮೇಲೆ ನಿಲ್ಲದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.