ಸುದ್ದಿ ಕನ್ನಡ ವಾರ್ತೆ
ಕಂಪ್ಲಿ- ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕ ಜೆ.ಎನ್.ಗಣೇಶರವರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಇಂದು ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ಬೆಂಗಳೂರು ನೋಂದಣಿ ಹೊಂದಿರುವ ಎರಡು ಕಾರುಗಳಲ್ಲಿ ಆರಕ್ಕೂ ಅಧಿಕ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಆರಂಭದಲ್ಲಿ ಕುರುಗೋಡು ನಿವಾಸಕ್ಕೆ ತೆರಳಿದ್ದ ಅಧಿಕಾರಿಗಳು ಅಲ್ಲಿ ಶಾಸಕರು ಇಲ್ಲದೇ ಇರುವುದರಿಂದ ಕಂಪ್ಲಿ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ಶಾಸಕರು ಮನೆಯಲ್ಲಿಯೇ ಇದ್ದು ಇಡಿ ಅಧಿಕಾರಿಗಳು ಪರಿಶೀಲನೆ ನೆಡೆಸುತ್ತಿದ್ದು, ಮಾಹಿತಿ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ. ನಿವಾಸದೊಳಗೆ ಶಾಸಕರ ಕುಟುಂಬವನ್ನು ಹೊರತು ಪಡಿಸಿ ಯಾರನ್ನು ಬಿಡುತ್ತಿಲ್ಲ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಆರ್ಥಿಕ ಅಪರಾಧ ಇಲಾಖೆಯ ದಾಳಿ ಏಕೆಂಬುದು ಇನ್ನು ತಿಳಿಯಬೇಕಾಗಿದೆ.

11-ಕಂಪ್ಲಿ- 1-ಮತ್ತು-2- ಕಂಪ್ಲಿ ಶಾಸಕರ ನಿವಾಸದ ಮುಂದೆ ಇಡಿ ಅಧಿಕಾರಿಗಳ ವಾಹನಗಳು ನಿಂತಿರುವುದು ಮತ್ತು ಇಡಿ ಅಧಿಕಾರುಗಳ ರಕ್ಷಣೆಗಾಗಿ ಆಗಮಿಸಿರುವ ಸಶಸ್ತ್ರ ಪಡೆ ಸಿಬ್ಬಂದಿಗಳು.