ಸುದ್ಧಿಕನ್ನಡ ವಾರ್ತೆ
ನವದೆಹಲಿ: ಜರ್ಮನಿಯಲ್ಲಿ ಎಂಬಿಎ (MBA in Germany) ವ್ಯಾಸಂಗ ಮಾಡುತ್ತಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಆತಂಕ ಮೂಡಿಸಿದೆ. ಆತನ ಕುಟುಂಬ ಗುರುವಾರ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮತ್ತು ಸಚಿವ ರಾಜೇಶ್ ಧರ್ಮಾನಿ ಅವರನ್ನು ಸಂಪರ್ಕಿಸಿದ್ದು, ಸಾಧ್ಯವಿರುವ ಎಲ್ಲ ನೆರವಿಗಾಗಿ ಜರ್ಮನ್ ಸರ್ಕಾರವನ್ನು ಸಂಪರ್ಕಿಸಲು ವಿದೇಶಾಂಗ ಸಚಿವಾಲಯ ಸಂಪರ್ಕಿಸುವಂತೆ ಕೋರಿದೆ.

 

ಬಿಲಾಸ್‍ಪುರ ಜಿಲ್ಲೆಯ ಕಂಡ್ರೂರ್ ಕಸ್ವಾ ಪ್ರದೇಶದದ ಆರ್ಯನ್, 2024 ರಿಂದ ಜರ್ಮನಿಯ ಮ್ಯೂನಿಚ್ ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮಗ ನಾಪತ್ತೆಯಾಗಿದ್ದಾರೆ  (Son missing) ಎಂದು ಆರ್ಯನ್ ತಂದೆ ವಿಚಿತ್ರಾ ಸಿಂಗ್ ಚಾಂಡೆಲ್ ತಿಳಿಸಿದ್ದಾರೆ. ಅಂದು ಮಧ್ಯಾಹ್ನ 1.30ರ ಸುಮಾರಿಗೆ ಸರೋವರವೊಂದಕ್ಕೆ ಈಜಲು ಹೋಗಿದ್ದ ಆರ್ಯನ್ ಅಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆರ್ಯನ್ ನುರಿತ ಈಜುಗಾರರಾಗಿದ್ದರು ಎಂದು ಜರ್ಮನಿಯಲ್ಲಿರುವ ಅವರ ಪರಿಚಯಸ್ಥರು ಹೇಳಿದ್ದಾರೆ. ಆದರೆ ಅವರು ಮುಳುಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಆದರೆ, ಆತನ ಮೃತದೇಹವಾಗಲಿ, ಆತ ಇರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಆರ್ಯನ್ ಏಕೈಕ ಮಗನಾಗಿದ್ದರಿಂದ ನಾಪತ್ತೆ ಸುದ್ದಿ ಬಂದಾಗಿನಿಂದ ನೋವು ಅನುಭವಿಸುತ್ತಿರುವುದಾಗಿ ಪೆÇೀಷಕರು ಹೇಳಿಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ‘ಫಾದರ್ ಡೇ’  (Father’s Day) ದಿನ ಆರ್ಯನ್ ತನ್ನ ಸ್ನೇಹಿತರೊಂದಿಗೆ ಸರೋವರದ ದಡದಲ್ಲಿ ವಾಕ್ ಮಾಡಲು ಹೋದಾಗ ತನಗೆ ಕರೆ ಮಾಡಿದ್ದ ಎಂದು ಚಾಂಡೆಲ್ ಹೇಳಿದ್ದಾರೆ.