ಸುದ್ಧಿಕನ್ನಡ ವಾರ್ತೆ
Goa-Belagavi: ಗೋವಾದ ಆದಾಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಗೋವಾ ಸೇರಿದಂತೆ ಕರ್ನಾಟಕದ ಬೆಳಗಾವಿ,ಬೆಂಗಳೂರು ಮತ್ತು ಧಾರವಾಡದಲ್ಲಿ ಹಲವು ಜನ ಕೈಗಾರಿಕೋದ್ಯಮಿಗಳ ಮನೆ ಮತ್ತು ಕಛೇರಿಯ ಮೇಲೆ ಧಾಳಿ ನಡೆಸಿದ್ದಾರೆ. ಲೆಕ್ಕಕ್ಕೆ ಸಿಗದ ಆಸ್ತಿಪಾಸ್ತಿಗಳ ಕಾಗದಪತ್ರಗಳ ತಪಾಸದಣೆ ಮುಂದುವರೆದಿದೆ.

ಬೆಳಗಾವಿಯ ಖ್ಯಾತ ಉದ್ಯಮಿ ವಿನೋದ ದೊಡ್ಡಣ್ಣವರ್, ಪುರುಷೋತ್ತಮ ದೊಡ್ಡಣ್ಣವರ್ ಒಡೆತನದ ಕಂಪನಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಧಾಳಿ ನಡೆದಿ ಕಾಗದಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಗೋವಾದಿಂದ ತೆರಳಿದ್ದ ಆದಾಯ ತೆರಿಗೆ ಅಧಿಕಾರಿಗಳು 5 ತಂಡಗಳಾಗಿ ವಿವಿದೆಡೆ ಮೂರು ಸ್ಥಳಗಳಲ್ಲಿ ಏಕಕಾಲಕ್ಕೆ ಧಾಳಿ ನಡೆಸಿದ್ದಾರೆ.

ದೊಡ್ಡಣ್ಣವರ್ ಕುಟುಂಬದವರು 2 ಸಕ್ಕರೆ ಕಾಖಾನೆ, ಐರನ್ ಹಾಗೂ ಗ್ರೈನೆಟ್ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. ಇವರ ಕಂಪನಿಯ ಉತ್ಪನ್ನಗಳು ವಿದೇಶಕ್ಕೂ ರಪ್ತಾಗುತ್ತದೆ.