ಪಣಜಿ: ಕಳೆದ ಒಂದು ದಿನದಿಂದ ಗೋವಾದಲ್ಲಿ ಭಾರಿ ಮಳೆಯಾಗುತ್ತಿದೆ, ಮುಂದಿನ ಇನ್ನೂ ಕೆಲ ದಿನಗಳ ಕಾಲ ಗೋವಾದಲ್ಲಿ ಮಳೆ ಮುಂದುವರೆಯಲಿದೆ. ಶನಿವಾರ ಮತ್ತು ಭಾನುವಾರ ಗೋವಾದಲ್ಲಿ ಭಾರಿ ಮಳೆ ಮುಂದುವರೆಯಲಿದೆ ಎಂದು ಗೋವಾ ಹವಾಮಾನ ಇಲಾಖೆ ಗೋವಾದಲ್ಲಿ ಆರೆಂಜ್ ಅಲರ್ಟ ಘೋಷಿಸಿದೆ. ಅಗಷ್ಟ 26 ರಿಂದ 28 ರ ವರೆಗೆ ಯಲ್ಲೊ ಅಲರ್ಟ ಘೋಷಿಸಿದೆ. ಇದರಿಂದಾಗಿ ಇನ್ನೂ ಒಂದು ವಾರ ಗೋವಾದಲ್ಲಿ ಭಾರಿ ಮಳೆ ಮುಂದುವರೆಯಲಿದೆ ಎನ್ನಲಾಗಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಅನುಸಾರ ಗೋವಾ ರಾಜ್ಯದಲ್ಲಿ ಶನಿವಾರ ಮತ್ತು ಭಾನುವಾರ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಸಂದರ್ಭದಲ್ಲಿ 30 ರಿಂದ 40 ಕಿಮಿ ಪ್ರತಿ ಗಂಟೆಗೆ ವೇಗದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.