ಪಣಜಿ: ಗೋವಾದ ಮಡಗಾಂವ ಮೋತಿಡೋಂಗರ ಪ್ರದೇಶದಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಅಗಷ್ಟ 20 ರಿಂದ ಅಗಷ್ಟ 22 ರ ವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇಯ ಆರಾಧನಾ ಮಹೋತ್ಸವ ಅತ್ಯಂತ ವಿಜ್ರಂಬಣೆಯಿಂದ ಜರುಗಿದೆ. ಮೂರು ದಿನಗಳ ಕಾಲ ಜರುಗಿದ ಈ ಮಹೋತ್ಸವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪಲ್ಲಕ್ಕಿ ಉತ್ಸವ, ಮುಂತಾದ ಧಾರ್ಮಿಕ ಅನುಷ್ಠಾನಗಳು ಅಪಾರ ಭಕ್ತರ ಉಪಸ್ಥಿತಿಯಲ್ಲಿ ಜರುಗಿದವು.
ಅಗಷ್ಟ 19 ರಂದು ಬೆಳಿಗ್ಗೆ 7.30 ಕ್ಕೆ ಧ್ವಜಾರೋಹಣ, ಧಾನ್ಯ ಮತ್ತು ಶ್ರೀ ಲಕ್ಷ್ಮೀಪೂಜೆ, 8.30 ಕ್ಕೆ ಸ್ವಸ್ತಿ ವಾಚನ ಮತ್ತು ಮಹಾಮಂಗಳಾರತಿ ನಡೆಸಲಾಯಿತು. ಅಗಷ್ಟ 20 ರಂದು ಬೆಳಿಗ್ಗೆ 11.30 ಕ್ಕೆ ಹುಬ್ಬಳ್ಳಿಯ ಯಮುನಾ ಬೆಳಗಲಿ ರವರಿಂದ ದಾಸವಾಣಿ ಕಾರ್ಯಕ್ರಮ, ಅಗಷ್ಟ 21 ರಂದು ಬೆಳಿಗ್ಗೆ 11.30 ಕ್ಕೆ ಡಾ.ಪ್ರೀತಾ ಪಾಟೀಲ್ ರವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
ಅಗಷ್ಟ 22 ರಂದು 11 ಗಂಟೆಯಿಂದ ಉತ್ತರ ಆರಾಧನಾ ಮಹಗೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ಇಷ್ಟೇ ಅಲ್ಲದೆಯೇ ಪ್ರತಿದಿನ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಈ ಎಲ್ಲ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀಗುರು ರಾಯರ ಆಶೀರ್ವಾದ ಪಡೆದರು. ಗೋವಾ ರಾಜ್ಯದ ಮೂಲೆ ಮೂಲೆಯಿಂದ ಮಾತ್ರವಲ್ಲದೆಯೇ ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.