ಪಣಜಿ: ಗೋವಾ ಕನ್ನಡ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಗಷ್ಟ 30 ರಂದು ಸಂಜೆ 6.30 ಕ್ಕೆ ಪಣಜಿಯ ಮೆನೆಜಸ್ ಬ್ರಗಾಂಜ ಸಭಾಗೃಹದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲು ಕರ್ನಾಟಕ ಹಾಗೂ ಗೋವಾ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಟಿ.ಎನ್ ಧ್ರುವಕುಮಾರ್ ರವರು ಆಗಮಿಸಲಿದ್ದು, ಅಂದು ಗೋವಾ ಕನ್ನಡ ಸಮಾಜದ ಹಿಂದಿನ ಅಧ್ಯಕ್ಷರು ಮತ್ತು ಹಿರಿಯ ಕನ್ನಡಿಗರ ಸಮ್ಮುಖದಲ್ಲಿ ಪದಗೃಹಣ ಸಮಾರಂಭ ಜರುಗಲಿದೆ ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ನುಡಿದರು.
ಗೋವಾ ಕನ್ನಡ ಸಮಾಜದ ನೂತನ ಪದಾಧಿಕಾರಿಗಳ ಪದಗೃಹಣದ ಕುರಿತು ಪಣಜಿಯಲ್ಲಿರುವ ಗೋವಾ ಕನ್ನಡ ಸಮಾಜದ ಕಛೇರಿಯಲ್ಲಿ ಬುಧವಾರ ಸಂಜೆ ಕರೆದಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಗೋವಾ ಕನ್ನಡ ಸಮಾಜಕ್ಕೆ ಖಾಯಂ ಆಹ್ವಾನಿತ ಸದಸ್ಯರನ್ನು ನೇಮಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಗಳು ಖಾಯಂ ಆಹ್ವಾನಿತ ಸದಸ್ಯರ ಆಯ್ಕೆಗೆ ಹೆಸರನ್ನು ಸೂಚಿಸಿದರು. ಅಜೀವ ಸದಸ್ಯತ್ವ ಅಭಿಯಾನ ಕೈಗೊಳ್ಳಲು ಪದಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ್ ಪೈ, ಕಾರ್ಯದರ್ಶಿ ಶ್ರೀಕಾಂತ ಲೋಣಿ, ಸದಸ್ಯರಾದ ಪ್ರಕಾಶ್ ಭಟ್, ಸಿ.ಜಿ.ಕಣ್ಣೂರ್, ಸುನೀಲ್ ಕುಮಟಳ್ಳಿ ಮತ್ತಿತರರು ಉಪಸ್ಥಿತರಿದ್ದರು.