ಪಣಜಿ: ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಅಗಷ್ಟ 30 ರಂದು ಶುಕ್ರವಾರ ಸಂಜೆ 6.30 ಕ್ಕೆ ಪಣಜಿಯ ಮೆನೆಜಸ್ ಬ್ರಗಾಂಜ ಸಭಾಗೃಹದಲ್ಲಿ “ಶ್ರಾವ್ಯ ಶ್ರಾವಣ ಪದಗ್ರಹಣ-2024 ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಗೋವಾ ವಿಧಾನಸಭೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿಗಳಾಗಿದ್ದ ಟಿ.ಎನ್,.ಧ್ರುವಕುಮಾರ್ ರವರು ಆಗಮಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಗೋವಾ ಕನ್ನಡ ಸಮಾಜದ ಮಾಜಿ ಅಧ್ಯಕ್ಚರಾದ ವಿ.ವಿ.ಕುಲಕರ್ಣಿ, ಅರವಿಂದ ಯಾಳಗಿ, ರಾಜಶೇಖರ್ .ಬಿ.ಕುಬ್ಸದ್, ವಿಜಯ್ ಶೆಟ್ಟಿ, ಪ್ರಹ್ಲಾದ ಗುಡಿ, ಮಹಾಬಲ ಭಟ್ ವೇದಿಕೆಯ ಮೇಲೆ ಉಪಸ್ಥಿತರಿರುವರು. ಅಂದು ಗೋವಾ ಕನ್ನಡ ಸಮಾಜದ ಕಛೇರಿಯಲ್ಲಿ ಶ್ರೀ ಸತ್ತನಾಯಣ ಮಹಾಪೂಜೆಯಿದ್ದು, ಇದರ ಪ್ರಸಾದವನ್ನು ಸಭಾಗೃಹದಲ್ಲಿ ವಿತರಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಬಿ.ಆರ್.ನವೀನ್ ತೀರ್ಥಳ್ಳಿ ರವರಿಂದ ಗಾಯನ ಕಾರ್ಯಕ್ರಮ ಜರುಗಲಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಕನ್ನಡಿಗರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕು ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕಾರ್ಯದರ್ಶಿ ಶ್ರೀಕಾಂತ ಲೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.