ಸುದ್ಧಿಕನ್ನಡ ವಾರ್ತೆ
ಪಣಜಿ: ಪ್ರವಾಸೋದ್ಯಮ ಆನಂದಿಸಲು ಗೋವಾಕ್ಕೆ ಪ್ರವಾಸಿಗರೇ ಎಚ್ಚರ. ಗೋವಾದಲ್ಲಿ ಪ್ರವಾಸಿಗರಿಂದ ಲೂಟಿ ಮಾಡುತ್ತಿರುವ ಗ್ಯಾಂಗ್…? ತೊಂದರೆಗೊಳಗಾದೀರಾ ಎಚ್ಚರ.
ಗೋವಾ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಗೋವಾಕ್ಕೆ ಪ್ರತಿದಿನ ದೇಶವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆ ಎಂಬಂತೆ ಇಲ್ಲಿ ಕೆಲ ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ನಡದ ಘಟನೆಯೊಂದನ್ನು ದೇಶೀಯ ಪ್ರವಾಸಿಗರೋರ್ವರು ಶೇರ್ ಮಾಡಿಕೊಂಡಿದ್ದಾರೆ. ಗೋವಾಕ್ಕೆ ಬಂದಾಗ ಮೂವರು ಸ್ನೇಹಿತರಿಂದ ಪೋಲಿಸ್ ಎಂದು ಹೇಳಿಕೊಂಡ ವ್ಯಕ್ತಿಯೋರ್ವ ಬೆದರಿಕೆಹಾಕಿ 10 ಸಾವಿರ ರೂ ದೋಚಿದ್ದಾನೆ. ಇಂತಹ ಕಹಿ ಘಟನೆಯನ್ನು ಪ್ರವಾಸಿಗರು ಶೇರ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ಗೋವಾದಲ್ಲಿ ಪ್ರವಾಸಿಗರ ಲೂಟಿ ಹೊಡೆಯುವ ಗ್ಯಾಂಗ್ ಕಾರ್ಯನಿರತವಾಗಿದೆಯೇ..? ಎಂಬ ಆತಂಕ ಕೂಡ ಸೃಷ್ಠಿಯಾಗಿದೆ.
ಗೋವಾಕ್ಕೆ ಬಂದಿದ್ದ ಮೂವರು ಸ್ನೇಹಿತರು ರಾತ್ರಿಯ ವೇಳೆಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಲ್ಲಿ ಹುಡುಗಿಯೊಂದಿಗೆ ಮಾತನಾಡುತ್ತಿದ್ದಾಗ ಪೋಲಿಸರು ಬಂದು ಇವರನ್ನು ತಡೆದರು. ತಮಗೆ ಹಣ ನೀಡುವಂತೆ ಪೋಲಿಸರು ಹೇಳಿದರು. ಆದರೆ ಪ್ರವಾಸಿಗರು ಹಣ ನೀಡಲು ನಿರಾಕರಿಸಿದರು. ನಂತರ ಇವರನ್ನು ಪೋಲಿಸ್ ಠಾಣೆಯ ಪಾಕಿಂಗ್ ಸ್ಥಳಕ್ಕೆ ಕರೆದೊಯ್ದರು. ನಿಮ್ಮನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುತ್ತೇವೆ, ಗೋವಾದಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂದು ನಿಮ್ಮ ಮನೆಯವರಿಗೆ ಹೇಳುತ್ತೇವೆ ಎಂದು ಪೋಲಿಸರು ಬೆದರಿಕೆ ಹಾಕಿದರು. ಪ್ರವಾಸಿಗರಿಗೆ ಮರುದಿನ ಬೆಳಿಗ್ಗೆ ದೆಹಲಿಗೆ ವಿಮಾನವಿತ್ತು, ಆದ ಕಾರಣ ಹೆದರಿಕೆಯಿಂದ ಇವರು ಪೋಲಿಸರಿಗೆ 10 ಸಾವಿರ ರೂ ನೀಡಿದರುಎಂದು ಈ ಪ್ರವಾಸಿಗರು ರೆಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದರಿಂದಾಗಿ ಗೋವಾದಲ್ಲಿ ಪೋಲಿಸರ ಹೆಸರಲ್ಲಿ ಯಾವುದಾದರೂ ಗ್ಯಾಂಗ್ ಕೆಲಸ ಮಾಡುತ್ತಿದೆಯೇ…? ಎಂಬ ಆತಂಕ ಕೂಡ ಎದುರಾಗಿದೆ.
ಬಾಳೆಕಾಯಿ ಗಾಡಿ ದೋಚಿದ್ದ ಪ್ರಕರಣ…!
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಗೋವಾಕ್ಕೆ ಬರುವ ಬಾಳೆಕಾಯಿ ಗಾಡಿಯನ್ನು ಕೂಡ ಇದೇ ರೀತಿ ಪೋಲಿಸರ ಹೆಸರು ಹೇಳಿಕೊಂಡು ದೋಚಿದ್ದ ಹಲವು ಘಟನೆ ನಡೆದಿತ್ತು. ಯಲ್ಲಾಪುರದಿಂದ ಗೋವಾಕ್ಕೆ ಬಂದು ಬಾಳೆಕಾಯಿ ವ್ಯಾಪಾರ ಮಾಡಿ ಹಣ ಪಡೆದುಕೊಂಡು ಊರಿಗೆ ವಾಪಸ್ಸಾಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಪೋಲಿಸರು ಎಂದು ಹೇಳಿಕೊಂಡು ಹಣ ದೋಚಿದ್ದ ಹಲವು ಘಟನೆ ನಡೆದಿದೆ. ಇದರಿಂದಾಗಿ ಗೋವಾದಲ್ಲಿ ಇಂತಹ ಗ್ಯಾಂಗ್ ಇರಬಹುದು, ಈ ಗ್ಯಾಂಗ್ ಪ್ರವಾಸಿಗರಿಂದ ಅಥವಾ ವ್ಯಾಪಾರಿಗಳಿಂದ ಹಣ ದೋಚುತ್ತಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ. ಈ ಕುರಿತಂತೆ ಗೋವಾ ಸರ್ಕಾರ ಎಚ್ಚೆತ್ತು ಕೂಡಲೆ ಕ್ರಮ ಕೈಗೊಳ್ಳಬೇಕಿದೆ.
Tourists come to Goa to enjoy tourism. Gangs robbing tourists in Goa…? Beware of trouble.
Goa is a world famous tourist destination. A large number of tourists from abroad arrive in Goa every day. Some events are happening here as a black spot for tourism. A domestic tourist has shared a recent incident. On coming to Goa, a man who claimed to be a policeman threatened and robbed Rs 10,000 from three friends. Tourists have shared such a bitter incident. Because of this gangs are busy robbing tourists in Goa..? The anxiety is also created.