ಸುದ್ಧಿಕನ್ನಡ ವಾರ್ತೆ
Goa; ಗೋವಾ ರಾಜ್ಯವು ಕ್ಯಾಸಿನೊಗಳ ಮುಖ್ಯ ಕೇಂದ್ರವಾಗಿದ್ದು, ಗೋವಾಕ್ಕೆ ಕ್ಯಾಸಿನೊಗಳು ಕೂಡ ದೇಶವಿದೇಶಿಯ ಹಲವು ಪ್ರವಾಸಿಗರ ಆಕರ್ಷಣೆಯಾಗಿದೆ. ಇದೀಗ ಕೇಂದ್ರ ಸರ್ಕಾರವು ಕ್ಯಾಸಿನೊಗಳ ಮೇಲೆ ಇದ್ದ ಜಿಎಸ್ ಟಿ ಯನ್ನು ಶೇ 28 ರಿಂದ ಶೇ 40 ಕ್ಕೆ ಏರಿಕೆ ಮಾಡಿರುವುದು ಗೋವಾ ಕ್ಯಾಸಿನೊಗಳ ಮೇಲೆ ಭಾರಿ ಹೊಡೆತ ಬಿದ್ದಂತಾಗಿದೆ.
ಕ್ಯಾಸಿನೊಗಳ ಮೇಲೆ ವಿಧಿಸುವ ಶೇ 28 ಜಿಎಸ್ ಟಿ ಯನ್ನು ಕಡಿಮೆ ಮಾಡಬೇಕು ಎಂದು ಈ ಹಿಂದೆ ಗೋವಾ ಸರ್ಕಾರವು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರವು ಹೊಸ ಘೋಷಣೆಯ ಅನುಸಾರ ಜೂಜು, ಹಾರ್ಸ ರೇಸಿಂಗ್, ಕ್ಯಾಸಿನೊಗಳ ಮೇಲೆ ಈ ಹಿಂದೆ ವಿಧಿಸುತ್ತಿದ್ದ ಶೇ 28 ಜಿಎಸ್ ಟಿ ದರವನ್ನು ಶೇ 40 ಕ್ಕೆ ಹೆಚ್ಚಳ ಮಾಡಿದೆ.
ಇದಗ ಕೇಂದ್ರ ಸರ್ಕಾರವು ಕ್ಯಾಸಿನೊಗಳ ಮೇಲೆ ಜಿಎಸ್ ಟಿ ದರವನ್ನು ಹೆಚ್ಚಳ ಮಾಡಿರುವುದು ಕ್ಯಾಸಿನೊ ವ್ಯವಹಾರ ಹಾಗೂ ಉದ್ಯೋಗದ ಮೇಲೆ ವಿಪರೀತ ಪರಿಣಾಮ ಬೀರಲಿದೆ ಎಂದು ಕ್ಯಾಸಿನೊ ಡೆಲ್ಟಿನ್ ಅಧ್ಯಕ್ಷ ಜಯದೇವ್ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಗೋವಾ ರಾಜ್ಯವು ದೇಶದ ಪ್ರಮುಖ ಕ್ಯಾಸಿನೊ ಕೇಂದ್ರವಾಗಿರುವುದರಿಂದ ಜಿಎಸ್ ಟಿ ದರ ಹೆಚ್ಚಳ ಮಾಡಿದರೆ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ ಎಂದು ಗೋವಾ ರಾಜ್ಯ ಸರ್ಕಾರವು ಕೂಡ ಈ ಹಿಂದೆ ಅಭಿಪ್ರಾಯಪಟ್ಟಿತ್ತು.
ಗೋವಾ ರಾಜಧಾನಿ ಪಣಜಿಯ ಮಾಂಡವಿ ನದಿಯಲ್ಲಿ ಕ್ಯಾಸಿನೊ ಬೋಟ್ ಗಳಿವೆ. ಇಷ್ಟೇ ಅಲ್ಲದೆಯೇ ರಾಜ್ಯದ ವಿವಿಧ ಸ್ಟಾರ್ ಹೋಟೆಲ್ ಗಳಲ್ಲಿಯೂ ಕ್ಯಾಸಿನೊಗಳನ್ನು ನಡೆಸಲಾಗುತ್ತದೆ. ಕ್ಯಾಸಿನೊಗಳಿಗೆ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಪ್ರಮುಖವಾಗಿ ಆಕರ್ಷಣೆಗೊಳಗಾಗುತ್ತಾರೆ. ಗೋವಾ ರಾಜಧಾನಿಗೆ ಬಂದರೆ ಪ್ರವಾಸಿಗರಿಗೆ ಮೊದಲು ಕಣ್ಣಿಗೆ ಬೀಳುವುದೇ ಕ್ಯಾಸಿನೊ. ನೆರೆಯ ರಾಜ್ಯಗಳಿಂದಲೂ ಕ್ಯಾಸಿನೊ ಆಟ ಆಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಿರುತ್ತಾರೆ. ಇದೀಗ ಕ್ಯಾಸಿನೊಗಳ ಮೇಲೆ ಜಿಎಸ್ ಟಿ ದರವನ್ನು ಶೇ 40 ಕ್ಕೆ ಏರಿಕೆ ಮಾಡಿರುವುದು ಕ್ಯಾಸಿನೊ ಪ್ರವಾಸಿಗರ ಮೇಲೆ ಹೊಡೆದ ಬಿದ್ದಂತಾಗಿದೆ
The state of Goa is a major center for casinos, and casinos in Goa are also an attraction for many foreign tourists. Now that the central government has increased the GST on casinos from 28% to 40%, Goa casinos have been hit hard.
The Goa government had earlier appealed to the central government to reduce the 28% GST levied on casinos. But according to the new announcement, the central government has increased the GST rate from 28% to 40% on gambling, horse racing and casinos.