ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ವಾಸ್ಕೊದ ಬಿಟ್ಸ ಪಿಲಾನಿ ಕ್ಯಾಂಪಸ್ ನಲ್ಲಿ 20 ವರ್ಷದ ಮತ್ತೋರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತಂಕಕಾರಿ ವಿಷಯವೆಂದರೆ ಕಳೆದ ಒಂದು ವರ್ಷದಲ್ಲಿ 5 ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಟ್ಸ ಪಿಲಾನಿ ಕ್ಯಾಂಪಸ್ ನಲ್ಲಿ ಸರಣಿ ಆತ್ಮಹತ್ಯೆ ನಡೆಯುತ್ತಿರುವುದು ಹಲವು ಪ್ರಶ್ನೆಗೆ ಎಡೆಮಾಡಿಕೊಟ್ಟಿದೆ.

ಋಷಿ ನಾಯಕರ್ (20) ಎಂಬ ವಿದ್ಯಾರ್ಥಿ ಬಿಟಗಸ ಪಿಲಾನಿ ಕ್ಯಾಂಪಸ್ ನಲ್ಲಿ ಆತ್ಯಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯಾಗಿದ್ದಾನೆ. ಈತ ಆತ್ಮತ್ಯೆ ಮಾಡಿಕೊಳ್ಳಲು ನಿಖರ ಕಾರಣ ಇದುವರೆಗೂ ಸ್ಪಷ್ಟವಾಗಿಲ್ಲ. ಮಾನಸಿಕತೆಯಿಂದ ಈ ವಿದ್ಯಾರ್ಥಿ ಕೊರಗುತ್ತಿದ್ದನೆ..? ಎಂಬ ಪ್ರಶ್ನೆ ಕೂಡ ಕೇಳಿಬರುತ್ತಿದೆ.
ಇದಕ್ಕೂ ಪೂರ್ವ ಪ್ರಿಯಾನ ಸಿಂಗ್ ಎಂಬ ವಿದ್ಯಾರ್ಥಿ ಡಿಸೆಂಬರ್ 2024 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ನಂತರ ಮಾರ್ಚ 2025 ರಲ್ಲಿ ಅಥರ್ವ ದೇಸಾಯಿ, ಕೃಷ್ಣಾ ಕಸೆರಾ (ಮೇ 2025) ಕುಶಾಗೃ ಜೈನ್ (ಅಗಷ್ಟ 2025) ಎಂಬ ವಿದ್ಯಾರ್ಥಿಗಳು ಕ್ಯಂಪಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಗೋವಾದ ಬಿಟ್ಸ ಪಿಲಾನಿ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಮಾತ್ರ ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಇಂತಹ ಯಾವ ಮಾನಸಿಕತೆಯ ಒತ್ತಡವಿದೆ…? ಎಂಬ ಪ್ರಶ್ನೆ ಕೂಡ ಎದುರಾಗಿದೆ. ಇಂತಹ ಘಟನೆ ಮುಂಬರುವ ದಿನಗಳಲ್ಲಿ ಮರುಕಳಿಸದಂತೆ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿದೆ.

 


Another 20-year-old student committed suicide at BITS Pilani campus in Vasco, Goa. The alarming thing is that 5 students have committed suicide in the campus in the last one year. The series of suicides taking place in BITS Pilani campus has raised many questions.