ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಬುಧವಾರ ದೆಹಲಿಗೆ ತೆರಳಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರವರನ್ನು ಭೇಟಿ ಮಾಡಿದರು. ಈ ಭೇಟಿಯ ಸಂದರ್ಭದಲ್ಲಿ ಗೋವಾದ ಅಭಿವೃದ್ಧಿ, ಉದ್ಯೋಗಾಧಾರಿತ ಪ್ರಗತಿ, ಹಾಗೂ ರಾಷ್ಟ್ರೀಯ ಅಭಿವೃದ್ಧಿ ವಿಷಯಾಧಾರಿತ ಚರ್ಚೆ ನಡೆಸಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ರವರು ಗೋವಾ ಮುಖ್ಯಮಂತ್ರಿಯವರು ಭೇಟಿಯಾಗಿರುವ ಪೋಟೊವನ್ನು ತಮ್ಮ ಎಕ್ಸ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂದು ಬುಧವಾರ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ನವದೆಹಲಿಯ ನಮ್ಮ ಕಾರ್ಯಾಲಯಕ್ಕೆ ಬಂದು ದೇಶದ ಅಭಿವೃದ್ಧಿ ಹಾಗೂ ಪ್ರಗತಿಯ ವಿಷಯದ ಮೇಲೆ ತಮ್ಮ ವಿಚಾರ ಮಂಡಿಸಿದರು. ಸಾರ್ವಜನಿಕ ಸೇವೆಗಾಗಿ ಸಮರ್ಪಿತ ಸಹಕಾರಿಗಳೊಂದಿಗೆ ಚರ್ಚೆ ನಡೆಸುವುದು ಯಾವಾಗಲೂ ಆನಂದ ಎನಿಸುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ರವರು ತಮ್ ಎಕ್ಸ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 


Goa Chief Minister Pramoda Sawant left for Delhi on Wednesday and met Union Minister HD Kumaraswamy. During this meeting, he discussed the development of Goa, employment-based progress, and national development.