ಸುದ್ಧಿಕನ್ನಡ ವಾರ್ತೆ
ಪಣಜಿ: ಗಣೇಶ ವಿಸರ್ಜನೆಗೆ ಕರ್ನಾಟಕದ ಹುಬ್ಬಳ್ಳಿಯಿಂದ ಗೋವಾಕ್ಕೆ ಬಂದಿದ್ದ 38 ವರ್ಷದ ವ್ಯಕ್ತಿ ಗಣೇಶ ಮೂರ್ತಿ ವಿಸರ್ಜನೆಯ ವೇಳೆ ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ಸಂದರ್ಭದಲ್ಲಿ ಗೋವಾ ಜೀವರಕ್ಷಕ ದಳದ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಗೋವಾದ ಮಾಪ್ಸಾದಲ್ಲಿ ನಡೆದಿದೆ.

ಗೋವಾದ ಮಾಪ್ಸಾದಲ್ಲಿ ಭಾನುವಾರ ರಾತ್ರಿ 9.30 ರ ಸುಮಾರು ಗೋವಾದ ಮಾಪ್ಸಾದಲ್ಲಿ ನಡೆದಿದೆ. ಕರ್ನಾಟಕದ ಹುಬ್ಬಳ್ಳಿಯ 38 ವರ್ಷದ ವ್ಯಕ್ತಿ ಗೋವಾದ ಮಾಪ್ಸಾಕ್ಕೆ ಗಣೇಶ ಮೂರ್ತಿ ವಿಸರ್ಜಣೆಯ ಸಂದರ್ಭದಲ್ಲಿ ಆಗಮಿಸಿದ್ದ ಕುಟುಂಬದೊಂದಿಗೆ ಬಂದಿದ್ದರು. ಗಣೇಶ ಮೂರ್ತಿ ವಿಸರ್ಜನೆಗೆ ಬಳಸಿದ್ದ ಮರದ ಆಸನವು ನದಿಯಲ್ಲಿ ಮೂರ್ತಿ ವಿಸರ್ಜಿಸುವಾಗ ತೇಲಿ ಹೋಗುತ್ತಿತ್ತು. ಈ ಮರದ ಆಸನವನ್ನು ಹಿಡಿಯಲು ಹುಬ್ಬಳ್ಳಿಯ ವ್ಯಕ್ತಿ ನೀರಿಗೆ ಇಳಿದಾಗ ನೀರಿನ ರಭಸಕ್ಕೆ ಕೊಚ್ಚಿಹೋಗಲು ಆರಂಭಿಸಿದ. ಆದರೆ ಜೀವರಕ್ಷಕ ದಳದ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿ ರಕ್ಷಿಸಿದರು. ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನಾ ಸ್ಥಳದಲ್ಲಿ ಡ್ಯೂಟಿಯಲ್ಲಿದ್ದ ದೃಷ್ಠಿ ಲೈಫ್ ಗಾರ್ಡ ರಾಕೇಶ್ ಕುಮಾರ್ ರವರು ಪರಿಸ್ಥಿತಿಯನ್ನು ಅರಿತು ಕೂಡಲೇ ರಕ್ಷಣಾ ಕಾರ್ಯಕ್ಕೆ ಮುಂದಾಗಿ ಹುಬ್ಬಳ್ಳಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಇವರು ಕೈಗೊಂಡ ತ್ವರಿತ ರಕ್ಷಣಾ ಕಾರ್ಯದಿಂದ ಹುಬ್ಬಳ್ಳಿಯ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 


A 38-year-old man who had come to Goa from Hubballi in Karnataka for the Ganesha immersion was washed away in the river during the immersion of the Ganesha idol.