ಸುದ್ಧಿಕನ್ನಡ ವಾರ್ತೆ
ಪಣಜಿ: ಕ್ರಿಕೇಟ್ ಆಟಗಾರ ಸಚಿನ್ ತೆಂಡುಲ್ಕರ್ ರವರು ಗೋವಾದಲ್ಲಿ ಮೀನುಗಾರನೋರ್ವನನ್ನು ಶ್ರೀಮಂತಗೊಳಿಸಿದ್ದಾರೆ. ಹೌದು …ಇಂತಹ ಘಟನೆಯನ್ನು ಗೋವಾದ ಮೀನುಗಾರರೋರ್ವರು ಹಂಚಿಕೊಂಡಿದ್ದಾರೆ.

ಖ್ಯಾತ ಕ್ರಿಕೇಟ್ ಆಟಗಾರ ಸಚಿನ್ ತೆಂಡುಲ್ಕರ್ ರವರು ಗೋವಾದ ಬೀಚ್ ನಲ್ಲಿ ನನ್ನನ್ನು ಭೇಟಿಯಾಗಿದ್ದ ವೀಡಿಯೊವನ್ನು ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಾದ ನಂತರ ನಾನೇ ಒಬ್ಬ ಸೆಲೆಬ್ರಿಟಿಯಂತಾದೆ. ನನ್ನನ್ನು ಭೇಟಿ ಮಾಡಲು ಸೆಲೆಬ್ರಿಟಿಗಳು ಕೂಡ ಬರಲಾರಂಭಿಸಿದರು ಎಂದು ಗೋವಾದ ಬಾಣಾವಲಿಯ ಮೀನುಗಾರ ಫ್ರಾನ್ಸಿಸ್ಕೊ ಫರ್ನಾಂಡಿಸ್ (ಪೆಲೆ ಫನಾಂಡೀಸ್) ರವರು ತಾವು ಶ್ರೀಮಂತರಾದ ಕಥೆಯನ್ನು ಹಂಚಿಕೊಂಡಿದ್ದಾರೆ.

ನನಗೆ ಪ್ರಧಾನಿ ನರೇಂದ್ರ ಮೋದಿಯವರ ಪೋನ್ ಬಂತು, ಇದರ ನಂತರವಂತೂ ಎಲ್ಲವೂ ಬದಲಾಯಿತು. ನನ್ನ ಮನವಿಯನ್ನು ಸರ್ಕಾರ ತ್ವರಿತವಾಗಿ ಪೂರ್ಣಗೊಳಿಸಿತು. ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ರವರ ಬಳಿ ಮಾಡಿದ್ದ ಮನವಿಯನ್ನು ಕೇವಲ ಅರ್ಧ ಗಂಟೆಯಲ್ಲಿ ಪೂರ್ಣಗೊಳಿಸಿದರು ಎಂದು ಫನಾಂಡಿಸ್ ತಮ್ಮ ಅನುಭವ ಹಂಚಿಕೊಂಡರು.

ಒಮ್ಮೆ ಮೀನುಗಾರಿಕೆಯ ಅನುಭವ ಪಡೆಯಲು ಖ್ಯಾತ ಕ್ರಿಕೇಟ್ ಆಟಗಾರರಾದ ಸಚಿನ್ ತೆಂಡುಲ್ಕರ್ ನನ್ನ ಬಳಿ ಬಂದಿದ್ದರು. ಆಗ ನಾನು ಸಚಿನ್ ರವರ ಪತ್ನಿಯ ಬಳಿ ನಿಮ್ಮಪತಿ ನನ್ನನ್ನು ಬಡವನನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದೆ. ಆಗ ಅವರು ಏಕೆ ಹೀಗೆ ..? ಎಂದು ವಿಚಾರಿಸಿದರು. ಆಗ ನಾನು ಹೇಳಿದೆ, ನಿಮ್ಮ ಪತಿ ಶತಕ ಬಾರಿಸಿದಾಗ, ಅರ್ಧ ಶತಕ ಬಾರಿಸಿದಾಗ ನನ್ನ ಹಣವನ್ನು ಖರ್ಚು ಮಾಡಿ ಇಲ್ಲಿ ನಾನು ಪಟಾಕಿ ಹೊಡೆದಿದ್ದೇನೆ. ಇದರಿಂದಾಗಿ ನನ್ನ ಹಣ ಖರ್ಚಾಗಿ ನಾನು ಬಡವನಾಗುತ್ತಿದ್ದೇನೆ ಎಂದು ಹೇಳಿದ್ದೆ. ನಂತರ ಅವರು ನಾವು ಹಿಡಿದಿದ್ದ ಮೀನನ್ನು ಬೇಯಿಸಿ ತಿನ್ನಲು ನನ್ನನ್ನು ರೆಸ್ಟೊರೆಂಟ್ ಗೆ ಕರೆದುಕೊಂಡು ಹೋಗಿದ್ದರು. ಆಗ ಸಚಿನ್ ರವರು ನಾನು ಈಗ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದರು.

ಆದರೆ ಇದು ಹೇಗೆ ಎಂದು ನನಗೆ ತಿಳಿಯಲಿಲ್ಲ. ಅವರು ನನ್ನೊಂದಿಗೆ ವೀಡಿಯೊ ಶೂಟ್ ಮಾಡಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ನಂತರ ಸೆಲೆಬ್ರಿಟಿಗಳು ನನ್ನನ್ನು ಭೇಟಿಯಾಗಲು ಬರಲಾರಂಭಿಸಿದರು. ಮೀನುಗಾರಿಕೆಗೆ ನನ್ನೊಂದಿಗೆ ಹೋಗಲು ಒಂದು ಸುತ್ತಿದೆ 10,000 ರೂ ನನಗೆ ನೀಡಬೇಕಾಗುತ್ತದೆ. ಹೀಗಿದ್ದರೂ ನನ್ನೊಂದಿಗೆ ಮೀನುಗಾರಿಕೆಗೆ ತೆರಳಲು ಮುಗಿ ಬೀಳುತ್ತಾರೆ ಎಂದು ಫನಾಂಡಿಸ್ ತಾನು ಶ್ರೀಮಂತರಾದ ಅನುಭವ ಹಂಚಿಕೊಂಡರು.

 


Cricketer Sachin Tendulkar has made a fisherman rich in Goa. Yes … such an incident was shared by a fisherman from Goa.

Famous cricketer Sachin Tendulkar had shared a video on his social media where he met me at the beach in Goa. After this I am like a celebrity. Even celebrities started coming to meet me, says Francisco Fernandes (Pele Fanandes), a fisherman from Banavali, Goa, who shared his get-rich story.