ಸುದ್ಧಿಕನ್ನಡ ವಾರ್ತೆ
ಪಾಕಿಸ್ತಾನ ಪ್ರಜೆಯಾಗಿದ್ದ ಗೋವಾ ಮೂಲದ ವ್ಯಕ್ತಿಗೆ ಪೌರತ್ವ ತಿದ್ಧುಪಡಿ ಖಾಯ್ದೆಯ (CAA) ಅಡಿಯಲ್ಲಿ ಬ್ರಾಂಡನ್ ವ್ಯಾಲೆಟನ್ ಕ್ರಾಸ್ಪೊ ರವರಿಗೆ ಭಾರತೀಯ ಪೌರತ್ವ ನೀಡಲಾಯಿತು. ಗೋವಾದ ಪರ್ವರಿಯ ಸಚಿವಾಲಯದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಅವರಿಗೆ ಭಾರತೀಯ ಪೌರತ್ವದ ಪ್ರಮಾಣಪತ್ರವನ್ನು ನೀಡಿದರು.

ಕ್ರಾಸ್ಫೊ ರವರ ಕುಟುಂಬ ಮೂಲತಃ ಗೋವಾದ ಹಣಜುಣ ದವರು. ಬ್ರಾಂಡನ್ ರವರ ಅಜ್ಜ ದೇಶ ವಿಭಜನೆಯಾಗುವ ಮೊದಲು ಪಾಕಿಸ್ತಾನಕ್ಕೆ ಹೋಗಿದ್ದರು. ಅವರಿಗೆ ಗೋವಾದ ಹಣಜುಣದಲ್ಲಿ ಆಸ್ತಿಯಿತ್ತು. ಬ್ರಾಂಡನ್ ರವರ ಪೋಷಕರು 1981 ರಲ್ಲಿ ಗೋವಾಕ್ಕೆ ಮರಳಿ, ಅವರ ಪೂರ್ವಜರ ಮನೆಯಲ್ಲಿ ವಾಸಿಸಲು ಆರಂಭಿಸಿದರು. ಬ್ರಾಂಡನ್ ರವರಿಗೆ ಇದುವರೆಗೂ ಭಾರತೀಯ ಪೌರತ್ವ ಪಡೆಯಲು ಸಾಧ್ಯವಾಗಿರಲಿಲ್ಲ. ಇಂತವರಿಗೆ ನ್ಯಾಯ ಒದಗಿಸಲು ಪೌರತ್ವ ತಿದ್ಧುಪಡಿ ಖಾಯ್ದೆ ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ರವರು ಇಂತಹ ನಾಗರೀಕರಿಗಾಗಿ ಸಿಎಎ ಕಾನೂನು ಜಾರಿಗೆ ತಂದಿದ್ದಾರೆ. ಇದರ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ತಾನದ ಭಾರತೀಯ ಮೂಲದ ಹಿಂದೂ, ಕ್ರಿಶ್ಚಿಯನ್, ಸಿಖ್ಖರಿಗೆ ಭಾರತೀಯ ಪೌರತ್ವ ನೀಡಲಾಗುತ್ತಿದೆ. ಈ ಕಾನೂನಿನಿಂದ ಹಲವರು ಪ್ರಯೋಜನ ಪಡೆದಿದ್ದಾರೆ. ಆರಂಭದಲ್ಲಿ ಈ ಕಾನೂನಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕಾನೂನಿನಿಂದ ಹಲವರು ಪ್ರಯೋಜನ ಪಡೆದಿದ್ದಾರೆ. 44 ವರ್ಷಗಳ ಸತತ ಹೋರಾಟದ ನಂತರ ಬ್ರಾಂಡನ್ ರವರಿಗೆ ನ್ಯಾಯ ಸಿಕ್ಕಿದೆ ಎಂದು ಗೋವಾ ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.

ಭಾರತೀಯ ಪೌರತ್ವ ನೀಡಿದ್ದಕ್ಕಾಗಿ ಬ್ರಾಂಡನ್ ರವರು ಗೋವಾ ಮುಖ್ಯಮಂತ್ರಿ ಸಾವಂತ್ ರವರಿಗೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಧನ್ಯವಾದ ಸಲ್ಲಿಸಿದರು. 44 ವರ್ಷಗಳ ನಂತರ ಭಾರತೀಯ ಪೌರತ್ವ ಪಡೆದಿದ್ದರಿಂದ ನಾವು ಉತ್ಸುಕರಾಗಿದ್ದೇವೆ ಎಂದು ಬ್ರಾಂಡನ್ ಹೇಳಿದರು. ಗೋವಾ ರಾಜ್ಯದಲ್ಲಿ ಇದುವರೆಗೂ ಮೂವರಿಗೆ ಭಾರತೀಯ ಪೌರತ್ವ ನೀಡಲಾಗಿದೆ.