ಸುದ್ಧಿಕನ್ನಡ ವಾರ್ತೆ
 ಗೋವಾದಲ್ಲಿ ಸಾರ್ವಜನಿಕವಾಗಿ ಕನ್ನಡ ಮಾತನಾಡಿದರೆ ಅಂತವರನ್ನು ಘಾಟಿ ಎಂದು ಹೀಯಾಳಿಸುವುದನ್ನು ನಾವು ಕಂಡಿದ್ದೇವೆ…ಕೇಳಿದ್ದೇವೆ. ಹೀಗಿರುವಾಗ ಗೋವಾದ ಸಚಿವರೊಬ್ಬರು ನಾನು ಕನ್ನಡ ಭಾಷೆ ಮಾತನಾಡುತ್ತೇನೆ ಎಂದು ಸುದ್ಧಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿರುವುದು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

ಹೌದು…ಇಂತಹ ಹೇಳಿಕೆ ನೀಡಿರುವುದು ಮತ್ಯಾರೂ ಅಲ್ಲ ಗೋವಾ ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ. ವಿಶ್ವಜಿತ್ ರಾಣೆ ರವರು ಸ್ಥಳೀಯ ಸುದ್ಧಿವಾಹಿನಿಗೆ ಸಂದರ್ಶನ ನೀಡಿದ್ದು ಇದರಲ್ಲಿ- ಗೋವಾದಲ್ಲಿ ಯಾವುದೇ ಭಾಷಾವಾದವಿಲ್ಲ. ಗೋವಾದಲ್ಲಿ ಹಿಂದಿ,ಕನ್ನಡ ಹೀಗೆ ಯಾವುದೇ ಭಾಷೆಯನ್ನು ಮಾತನಾಡಬಹುದು. ನಾನು ಕನ್ನಡ ಮಾತನಾಡುತ್ತೇನೆ. ನನ್ನ ತಾಯಿ ಕರ್ನಾಟಕದವರು,ಕನ್ನಡದವರು. ಎಂದು ಹೇಳುವ ಮೂಲಕ ಗೋವಾದಲ್ಲಿ ಯಾವುದೇ ಭಾಷಾವಾದವಿಲ್ಲ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆಯೇ ರಾಣೆ ರವರು ಮಹಾರಾಷ್ಟ್ರದ ಭಾಷಾ ವಾದದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ರಾಣೆ ರವರ ಮನೆಯಲ್ಲಿ ಪೂಜೆಗೆ ಹೆಚ್ಚಿನ ಬ್ರಾಹ್ಮಣರು ಕರ್ನಾಟಕದವರು,,,,
ಗೋವಾದ ವಾಳಪೈಯಲ್ಲಿರುವ ರಾಜ್ಯ ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ರವರು ಕಳೆದ ಸುಮಾರು ಮೂರು ತಿಂಗಳಿಂದ ದೊಡ್ಡ ದೊಡ್ಡ ಪೂಜಾ ಕಾರ್ಯವನ್ನು ನೆರವೇರಿಸುತ್ತಿದ್ದಾರೆ. ಈ ಪೂಜಾ ಕಾರ್ಯಕ್ಕೆ ಕರ್ನಾಟಕದಿಂದ ಅದರಲ್ಲೂ ಮುಖ್ಯವಾಗಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಿಂದಲೇ ನೂರಾರು ಬ್ರಾಹ್ಮಣರು ಆಗಮಿಸಿದ್ದಾರೆ. ಇಷ್ಟೇ ಅಲ್ಲದೆಯೇ ಲಲಿತಾ ಸಹಸ್ರನಾಮ,ಸೌಂದರ್ಯ ಲಹರಿ ಹಾಗೂ ಕುಂಕುಮಾರ್ಚನೆ ಕಾರ್ಯ ನೆರವೇರಿಸಲು ಪ್ರಮುಖವಾಗಿ ಯಲ್ಲಾಪುರದಿಂದಲೇ ಸುಮಾರು 50 ಕ್ಕೂ ಹೆಚ್ಚು ಸುಮಂಗಲಿಯರು ಮೂರ್ನಾಲ್ಕು ಬಾರಿ ರಾಣೆ ರವರ ಮನೆಗೆ ಆಗಮಿಸಿದ್ದರು. ಕರ್ನಾಟಕದಿಂಲೇ ರಾಣೆ ರವರು ಹೆಚ್ಚಾಗಿ ಪೂರೈ ಕೈಂಕರ್ಯಗಳಿಗಾಗಿ ಬ್ರಾಹ್ಮಣರನ್ನು ಕರೆಸುತ್ತಿರುವುದು ವಿಶೇಷವಾಗಿದೆ.

ಸಚಿವ ವಿಶ್ವಜಿತ್ ರಾಣೆ ರವರು ದೇವರು,ಧರ್ಮ ಹೆಚ್ಚಾಗಿ ನಂಬುವ ವ್ಯಕ್ತಿ. ರಾಣೆ ರವರು ಮಹಾಕಾಲ, ಕೊಲ್ಲಾಪುರ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಆಗಾಗ ತೆರಳಿ ಸೇವೆ ಸಲ್ಲಿಸಿ ಬರುತ್ತಾರೆ. ಇಷ್ಟೇ ಅಲ್ಲದೆಯೇ ಅವರ ಮನೆಯಲ್ಲಿಯೂ ಕೂಡ ದೇವತಾ ಕಾರ್ಯ ನಡೆಯುತ್ತಲೇ ಇರುತ್ತದೆ. ಇದು ವಿಶ್ವಜಿತ್ ರಾಣೆ ರವರ ಉತ್ತಮ ಸಂಸ್ಕಾರ ಸೂಚಿಸುತ್ತದೆ ಎಂದರೂ ತಪ್ಪಾಗುವುದಿಲ್ಲ.

ಮೋದಿಯವರ ಕಮಾಂಡ,ನೇತೃತ್ವದ ಇಷ್ಟ-ರಾಣೆ
ಪ್ರಧಾನಮಂತ್ರಿ ನರೇಂದ್ರ ಮೋದಿ ರವರ ನೇತೃತ್ವ ಹಾಗೂ ಕಮಾಂಡ ನೋಡಿ ನಾನು ಕಾಂಗ್ರೇಸ್ ಬಿಟ್ಟು ಬಿಜೆಪಿ ಸೇರಿದ್ದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಇದ್ದರೆ ಅದರ ಹೆಚ್ಚಿನ ಲಾಭ ರಾಜ್ಯಕ್ಕೆ ಆಗುತ್ತದೆ. ಬಿಜೆಪಿ ಹಾಗೂ ಕಾಂಗ್ರೇಸ್ ನಡುವೆ ಶಿಸ್ತಿನ ದೊಡ್ಡ ವ್ಯತ್ಯಾಸವಿದೆ ಎಂದು ನುಡಿದ ರಾಣೆ, ಗೋವಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಿರಿಯ ನಾಗರೀಕರಿಗೆ ಉತ್ತಮ ರೀತಿಯ ವೈದ್ಯಕೀಯ ಉಪಚಾರ ಲಭಿಸಬೇಕು ಎನ್ನುವುದು ನನ್ನ ಆಘ್ರಹವಾಗಿದೆ. ಅಂದು ಒಪಿಡಿ ಬಂದ್ ಇತ್ತು. ಅಂದು ಗೋವಾ ವೈದ್ಯಕೀಯ ಮಹಾವಿದಗಯಾಲಯದ ಎಮರ್ಜನ್ಸಿ ವಾರ್ಡಗೆ ಹೋಗದೆಯೇ ಬೇರೆ ದಾರಿ ಇರಲಿಲ್ಲ. ಎಂದು ಹೇಳುವ ಮೂಲಕ ಗೋವಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದಿದ್ದ ಘಟನೆಯ ಕುರಿತು ಸ್ಪಷ್ಠೀಕರಣ ನೀಡಿದರು.