ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪ್ರಸಿದ್ಧ ಬಿಟ್ಸ ಪಿಲಾನಿ, ಕೆಕೆ ಬಿರ್ಲಾ ಕ್ಯಾಂಪಸ್ ನಲ್ಲಿ ಮತ್ತೋರ್ವ ವಿದ್ಯಾರ್ಥಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿ ಮಲಗಿದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪ್ರಸಾಸನವು ತಿಳಿಸಿದೆ. ಕಳೆ ಒಂದು ವರ್ಷದಲ್ಲಿ ನಡೆದಿರುವ 4 ನೇಯ ಘಟನೆ ಇದಾಗಿದೆ, ಕಳೆದ ನಾಲ್ಕು ತಿಂಗಳಲ್ಲಿ ನಡೆದ ಎರಡನೇಯ ಘಟನೆ ಇದಾಗಿರುವುದರಿಂದ ಇತರ ವಿದ್ಯಾರ್ಥಿಗಳು ಕೂಡ ಆತಂಕ ಪಡುವಂತಾಗಿದೆ.
ಉತ್ತರಪ್ರದೇಶ ಮೂಲದ ವಿದ್ಯಾರ್ಥಿ ಕುಶಾಗ್ರ ಜೈನ್ ಈತ ಇಕಾನಾಮಿಕ್ಸ ಹಾಗೂ ಕಂಪ್ಯೂಟರ್ ಸೈನ್ಸ ಮೂರನೇಯ ವರ್ಷದ ವಿದ್ಯಾರ್ಥಿಯಾಗಿದ್ದ. ಶೈಕ್ಷಣಿಕ ದೃಷ್ಠಿಯಿಂದ ವಿದ್ಯಾರ್ಥಿ ಕುಶಾಗ್ರ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ. ಶನಿವಾರ ಬೆಳಿಗ್ಗೆ 11 ಗಂಟೆಯಾದರೂ ಈತನ ಕೊಠಡಿಯ ಬಾಗಿಲು ತೆರೆದಾಗ ಈತ ಎಷ್ಟು ಪ್ರಯತ್ನಿಸಿದರೂ ಎದ್ದೇಳಲೇ ಇಲ್ಲ . ನಂತರ ಕೂಡಲೇ ವೈದ್ಯರನ್ನು ಕರೆಸಿದಾಗ ಈತ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು.
ಕೂಡಲೇ ಈ ಘಟನೆಯ ಮಾಹಿತಿಯನ್ನು ಪೋಲಿಸರಿಗೆ ನೀಡಲಾಯಿತು. ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದ್ದಾರೆ. ತನಿಖೆಗೆ ಪ್ರಶಾಸನವು ಸಹಕರಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಒಂದು ವರ್ಷದಲ್ಲಿ ಬಿಟ್ಸ ಪಿಲಾನಿ ಕ್ಯಾಂಪಸ್ ನಲ್ಲಿ ನಡೆದ ನಾಲ್ಕನೇಯ ಘಟನೆ ಇದಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ಇದಕ್ಕೂ ಮೊದಲು ಡಿಸೆಂಬರ್ 2024 ರಲ್ಲಿ ಓಂ ಪ್ರಿಯನ್ ಸಿಂಗ್, ಮಾರ್ಚ 2025 ರಲ್ಲಿ ಅಥರ್ವ ದೇಸಾಯಿ, ಮೇ 2025 ರಲ್ಲಿ ಕೃಷ್ಣಾ ಕಸೇರಾ ಈ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.