ಸುದ್ಧಿಕನ್ನಡ ವಾರ್ತೆ
ಪಣಜಿ:ಗೋವಾ ಕ್ಯಾಸಿನೊದಲ್ಲಿ (Goa cassino) ನಡೆಯುತ್ತಿದ್ದ ಅಕ್ರಮ ಜೂಜಾಟದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಒಟ್ಟೂ 11 ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಈ ಎಲ್ಲ ಪ್ರವಾಸಿಗರು ಗೋವಾದ ಕ್ಯಾಸಿನೊವೊಂದರಲ್ಲಿ ರಾತ್ರಿ ಅಕ್ರಮ ಜೂಜಾಟ ಆಡುತ್ತಿದ್ದರು.
ಗೋವಾದ ಕಾಂದೋಳಿಯಲ್ಲಿರುವ “ಪಪೀಜ್ ಕ್ಯಾಸಿನೊ”ದಲ್ಲಿ ಅಕ್ರಮವಾಗಿ ಜೂಜಾಟ ನಡೆಯುತ್ತಿರುವ ಕುರಿತು ಮಾಹಿತಿಯ ಹಿನ್ನೆಲೆಯಲ್ಲಿ ಕ್ರೈಂ ಬ್ರ್ಯಾಂಚ್ ಪೋಲಿಸರು ಧಾಳಿ ನಡೆಸಿ 11 ಜನರನ್ನು ಬಂಧಿಸಿದ್ದು, ಈ ಕಾರ್ಯಾಚರಣೆಯಲ್ಲಿ 35 ಲಕ್ಷ ರೂ ವಷಪಡಿಸಿಕೊಳ್ಳಲಾಗಿದೆ.
ಕ್ರೈಂ ಬ್ರ್ಯಾಂಚ್ ಪೋಲಿಸರಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ- ಬುಧವಾರ ಬೆಳಗಿನ ಜಾವ 2 ಗಂಟೆಯ ಸುಮಾರು ಈ ಕಾರ್ಯಾಚರಣೆ ನಡೆಸಲಾಗಿದೆ. ಪಿಐ ತುಷಾರ್ ಲೋಟಲೀಕರ್ ರವರ ನೇತೃತ್ವದಲ್ಲಿ ಕ್ಯಾಸಿನೊದ ಮೇಲೆ ಧಾಳಿ ನಡೆಸಲಾಯಿತು. ಅಂದರ್ ಬಾಹರ್ ಜೂಜು ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಜೂಜಾಟ ಆಡುತ್ತಿದ್ದ 11 ಜನರನ್ನು ಪೋಲಿಸರು ಬಂಧಿಸಿದ್ಧಾರೆ. ಜೂಜು ಪ್ರತಿಬಂಧಕ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಂಧನಕ್ಕೊಳಗಾದವರಲ್ಲಿ ಗೋವಾದ ಇಬ್ಬರು ಕರ್ಮಚಾರಿಗಳು ಸೇರಿದಂತೆ ಕರ್ನಾಟಕ, ಮುಂಬಯಿ, ದೆಹಲಿ, ಬಿಹಾರ ರಾಜ್ಯಗಳ ಪ್ರವಾಸಿಗರು ಒಳಗೊಂಡಿದ್ದಾರೆ. ಪೋಲಿಸರು ಘಟನಾ ಸ್ಥಳದಿಂದ ಜೂಜು ಅಡ್ಡೆಯ ಟೇಬಲ್, ರಿಜರ್ಟ ತೋರಿಸುವ ಡಿಸ್ ಪ್ಲೆ ಸ್ಕ್ರೀನ್, ಇಸ್ಪೀಟ್ ಪಾನ್, ಸೇರಿದಂತೆ ಜೂಜಾಟ ಆಡಲು ಬಳಸುತ್ತಿದ್ದ ಇತರ ವಸ್ತುಗಳನ್ನು ಪೋಲಿಸರು ವಷಪಡಿಸಿಕೊಂಡಿದ್ದಾರೆ.
ವಷಪಡಿಸಿಕೊಂಡ ವಿವಿಧ ವಸ್ತುಗಳ ಒಟ್ಟೂ ಮೌಲ್ಯ 35 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.