ಸುದ್ಧಿಕನ್ನಡ ವಾರ್ತೆ
ಪಣಜಿ: ಕರ್ನಾಟಕದಿಂದ ಗೋವಾಕ್ಕೆ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿರುವ ಪ್ರಕರಣ ಹೆಚ್ಚುತ್ತಲೇ ಇದೆ. ಇದೀಗ ಮಂಗಳವಾರವೂ ಕೂಡ ಇಂತದ್ದೇ ಘಟನೆ ನಡೆದಿದೆ. ಅಕ್ರಮವಾಗಿ ಗೋವುಗಳ ಹತ್ಯೆ ನಡೆಸಿ ಗೋಮಾಂಸ ಮಾರಲು ಗೋವಾಕ್ಕೆ ಪೂರೈಸುತ್ತಿರುವ ದೊಡ್ಡ ಜಾಲವೇ ಇದೆಯೇ..? ಎಂಬ ಆತಂಕ ಕೂಡ ಮೂಡುವಂತಾಗಿದೆ.

ಕರ್ನಾಟಕದ ಹುಬ್ಬಳ್ಳಿಯಿಂದ ಗೋವಾದ ಮಾಪ್ಸಾಕ್ಕೆ ಇನ್ನೊವಾ ಕಾರಿನಲ್ಲಿ 620 ಕಿಲೊ ಗೋಮಾಂಸವನ್ನು ಅಕ್ರವಾಗಿ ಮಂಗಳವಾರ ಸಾಗಾಟ ಮಾಡುತ್ತಿದ್ದಾಗ ಗೋವಾದ ಮೋಲೆಮ್ ಚೆಕ್ ಪೋಸ್ಟನಲ್ಲಿ ತಪಾಸಣೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.

ಇದೇ ವಾಹನದಲ್ಲಿ ಒಂದು ಎಮ್ಮೆಯ ಮಾಂಸ ಕೂಡ ಇತ್ತು ಎನ್ನಲಾಗಿದೆ. ಗೋವಾ ಗಡಿಯಲ್ಲಿ ತಪಾಸಣೆ ನಡೆಸಿದ ಪೋಲಿಸರು ಶಂಕಿತ ವ್ಯಕ್ತಿಯನ್ನು ವಷಕ್ಕೆ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಿಂದ ಗೋವಾಕ್ಕೆ ಅಕ್ರಮ ಗೋಮಾಂಸ ಪ್ರಕರಣ ಹೆಚ್ಚುತ್ತಲೇ ಇದೆ. ಇದರಿಂದಾಗಿ ಗೋವುಗಳ ಹತ್ಯೆ ನಡೆಸಿ ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬುದು ಗೋ ರಕ್ಷಕರ ಆಘ್ರಹವಾಗಿದೆ.