ಸುದ್ಧಿಕನ್ನಡ ವಾರ್ತೆ
ಶಿಕ್ಷಣಕ್ಕಾಗಿ ತನ್ನ ಚಿಕ್ಕಪ್ಪನ ಮನೆಯಲ್ಲಿದ್ದು ಶಿಕ್ಷಣ ಬಿ.ಕಾಂ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಯೋರ್ವ ತನ್ನ ಮೂವರು ಸ್ನೇಹಿತರೊಡಗೂಡಿ 65 ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ದೋಚಿದ ಘಟನೆ ನಡೆದಿದ್ದು, ಕದ್ಧ ಈ ಹಣದಲ್ಲಿ ಗೋವಾ ಪ್ರವಾಸ ಮಾಡುವುದು ಹಾಗೂ ಹಣವನ್ನು ಹೂಡಿಕೆ ಮಾಡುವುದು ಈತನ ಉದ್ದೇಶವಾಗಿತ್ತು ಎನ್ನಲಾಗಿದ್ದು ಇಂತಹ ಆತಂಕಕಾರಿ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಸಚಿತ್ ಎಂದು ಈ ಮುಖ್ಯ ಆರೋಪಿಯ ಹೆಸರಾಗಿದ್ದು, ಈತ ಬೆಂಗಳೂರಿನಲ್ಲಿ ತನ್ನ ಚಿಕ್ಕಪ್ಪನ ಮನೆಯಲ್ಲಿ ವಾಸಿಸುತ್ತಿದ್ದ. ಮೇ ತಿಂಗಳಲ್ಲಿ ಈತ ತನ್ನ ಚಿಕ್ಕಪ್ಪನ ಮನೆಯಿಂದ 65 ಲಕ್ಷ ರೂ ಬಂಗಾರವನ್ನು ದೋಚಿದ ಆರೋಪವಿದೆ. ಈ ಬಂಗಾರವನ್ನು ತನ್ನ ಸ್ನೇಹಿತನಾದ ಯಶವಂತ್ ನಿಗೆ ನೀಡಿದ್ದ. ಇವರಿಬ್ಬರೂ ಒಂದೇ ಕಾಲೇಜಿನಲ್ಲಿ ಬಿ.ಕಾಂ ಶಿಕ್ಷಣ ಪಡೆಯುತ್ತಿದ್ದರು.

ನಂತರ ಯಶವಂತ್ ಈತನು ಬಂಗಾರ ಮಾರಿ ಹಣ ಪಡೆದುಕೊಳ್ಳಲು ಆತನ ಮಿತ್ರ ತನುಷ್ ಗೆ ನೀಡಿದ್ದ. ಈ ಬಂಗಾರವನ್ನು ಗೋವಾದ ಒಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದ. ಇದರಲ್ಲಿ ಕೆಲ ಹಣವನ್ನು ಯಶವಂತ್ ನು ತನ್ನ ಭವಿಷ್ಯದ ಯೋಜನೆಗಾಗಿ ಹೂಡಿಕೆ ಮಾಡಿದ್ದ.

ಈ ಘಟನೆಯು ಸಚಿತ್ ನ ಚಿಕ್ಕಪ್ಪ ಶ್ರೀನಿವಾಸನಿಗೆ ಜೂನ್ 9 ರಂದು ಗೊತ್ತಾಯಿತು. ಈತ ಕಳ್ಳತನವಾಗಿರುವ ಕುರಿತಂತೆ ಪೋಲಿಸ್ ದೂರು ನೀಡಿದ. ನಂತರ ಸಚಿತ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಸಚಿತ್ ಕಳ್ಳತನದ ಮಾಹಿತಿ ನೀಡಿದ ಎನ್ನಲಾಗಿದೆ. ಪೋಲಿಸರು ಆರೋಪಿಗಳನ್ನು ಬಂಧಿಸದ್ದಾರೆ. ವಿದ್ಯಾರ್ಥಿಗಳು ಇಷ್ಟು ದೊಡ್ಡ ಪ್ರಮಾಣದ ಬಂಗಾರ ಕಳ್ಳತನ ಮಾಡಿರುವ ಬಗ್ಗೆ ಆಶ್ಚರ್ಯ ವ್ಯಕ್ತವಾಗುತ್ತಿದೆ.