ಸುದ್ಧಿಕನ್ನಡ ವಾರ್ತೆ
ಗೋವಾಕ್ಕೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರಿಗೆ ಸ್ಪಾ (SPA) ಹೆಸರಿನಲ್ಲಿ ಭಾರಿ ಮೋಸವೆಸಗುತ್ತಿರುವ ಹಾಗೂ ಗಂಭೀರ ವಿಷಯ ಬೆಳಕಿಗೆ ಬಂದಿದೆ. ಕರ್ನಾಟಕದಿಂದ ಗೋವಾಕ್ಕೆ ಬಂದಿದ್ದ ಪ್ರವಾಸಿಗರಿಗೆ ಇಂತಹ ಕೆಟ್ಟ ಅನುಭವವಾಗಿದೆ ಎಂದು ಆ ಪ್ರವಾಸಿಗರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಗೋವಾದ ಸ್ಫಾ ಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಗಂಭೀರ ಪ್ರಶ್ನೆ ಎದುರಾಗಿದೆ.
ಪ್ರವಾಸಿಗನೋರ್ವ ತನ್ನ ಸಹೋದರನೊಂದಿಗೆ ಗೋವಾದಲ್ಲಿ ಸ್ಫಾ (SPA) ಹುಡುಕುತ್ತಿದ್ದ ಸಂದರ್ಭದಲ್ಲಿ ಅತ್ಯಂತ ಕೆಟ್ಟ ಮತ್ತು ಭೀತಿಯ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಗೋವಾದಲ್ಲಿ ಸ್ಪಾ ಉದ್ಯೋಗ ಮತ್ತು ಚಟುವಟಿಕೆಯ ಬಗ್ಗೆ ಹಲವು ಪ್ರಶ್ನೆಗಳು ಉಧ್ಭವವಾಗಿದೆ.
ಕರ್ನಾಟಕದ ಬೆಂಗಳೂರಿನಿಂದ ಗೋವಾಕ್ಕೆ ವೀಕೆಂಡ್ ಗಾಗಿ ಬಂದಿದ್ದ ಪ್ರವಾಸಿಗರಿಗೆ ಗೋವಾದಲ್ಲಿ ಸ್ಫಾ ಹುಡುಕುತ್ತಿದ್ದ ವೇಳೆ ಕೆಟ್ಟ ಅನುಭವವಾಗಿದೆ. ಗೋವಾಕ್ಕೆ ಬಂದಿದ್ದ ಈ ಪ್ರವಾಸಿಗರು ಸ್ಫಾಗೆ ತೆರಳುವ ನಿರ್ಣಯ ತೆಗೆದುಕೊಂಡು ಗೂಗಲ್ ನಲ್ಲಿ ಉತ್ತಮ ರೇಟಿಂಗ್ ಇರುವ ಸ್ಪಾ ಹುಡುಕುತ್ತಿದ್ದಾಗ ಒಂದು ಸ್ಫಾ ಆಯ್ಕೆ ಮಾಡಿಕೊಂಡರು. ಯಾವಾಗ ಅವರು ಅಲ್ಲಿದ್ದ ನಂಬರ್ ಗೆ ಕರೆ ಮಾಡಿದರೋ ಆಗ – ಸ್ಫಾ ವಿಳಾಸ ಬದಲಾಗಿದೆ ಸದ್ಯ ನೀವಿರುವ ಸ್ಥಳದ ಬಳಿಯೇ ಇದೆ ಎಂಬ ಮಾಹಿತಿ ನೀಡಲಾಯಿತು.
ನಂತರ ಬೆಂಗಳೂರಿನ ಈ ಇಬ್ಬರೂ ಸಹೋದರರು ಸ್ಫಾಗೆ ತಲುಪಿದರು. ಆದರೆ ಅಲ್ಲಿ ಅವರಿಗೆ ಲೋಟಸ್ ಸ್ಥಾಯಿ ಸ್ಪಾ ಎಂಬ ಹೆಸರು ಕಂಡುಬಂತು. ಆದರೆ ಗೂಗಲ್ ನಲ್ಲಿ ಇದರ ಹೆಸರೇ ಬೇರೆಯಿತ್ತು. ಅಲ್ಲಿ ಸ್ಫಾ ಒಳಗೆ ಕಾಲಿಡುವ ಸಂದರ್ಭದಲ್ಲಿ ಪ್ರವಾಸಿಗರಿಗೆ ಪಶ್ಚಾತಾಪವುಂಟಾಗುವಂತಾಯಿತು. ಏಕೆಂದರೆ ಅಲ್ಲಿ ಶಂಕಾಸ್ಪದ ಮತ್ತು ಅಸುರಕ್ಷಿತ ವಾಗಿತ್ತು. ಅಲ್ಲಿ ಅತ್ಯಂತ ಚೀಕ್ ಕ್ರೌಡ್ ಇತ್ತು. ಬೆಂಗಳೂರಿನ ಸಹೋದರರು ಕೂಡಲೇ ಅಲ್ಲಿಂದ ಕಾಲುಕಿತ್ತರು.
ಈ ಕೆಟ್ಟ ಅನುಭವದ ನಂತರವೂ ಬೆಂಗಳೂರು ಸಹೋದರರು ಇತರೆಡೆ ಉತ್ತಮ ಸ್ಫಾ ಹುಡುಕಲು ಆರಂಭಿಸಿದರು. ಅಲ್ಲಿ ಪೋನ್ ಮಾಡಿದಾಗಲೂ ಅವರಿಗೆ ಇಂತಹದ್ದೇ ಅನುಭವವಾಯಿತು. ಅಲ್ಲಿ ಇನ್ನೂ ಅನುಭವ ಕೆಟ್ಟದ್ದಾಗಿತ್ತು. ಗೂಗಲ್ ಟಾಪ್ ಲೀಸ್ಟ ನಲ್ಲಿರುವ ಸ್ಫಾಗಳೆಲ್ಲವೂ ಇಂದಹದ್ದೇ ಆಗಿದೆ ಎಂದು ಬೆಂಗಳೂರು ಸಹೋದರರು ತಮ್ಮ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ. ಇದೇ ರೀತಿ ಗೂಗಲ್ ನಲ್ಲಿ ಹಲವು ಸ್ಫಾಗಳನ್ನು ಹುಡುಕಿ ಪೋನ್ ಮಾಡಿದಾಗಲೂ ಇದೇ ರೀತಿಯ ಕೆಟ್ಟ ಅನುಭವವಾಗಿರುವುದಾಗಿ ಅವರು ಹಂಚಿಕೊಂಡಿದ್ದಾರೆ.
ಗೋವಾದಲ್ಲಿ ಸ್ಫಾ ಹೆಸರಿನಲ್ಲಿ ನಡೆಯುತ್ತಿರುವ ಉದ್ಯೋಗ ದೊಡ್ಡ ಅವ್ಯವಹಾರವಾಗಿದೆ ಎಂದು ಬೆಂಗಳೂರು ಸಹೋದರರು ಅನುಭವ ಹಂಚಿಕೊಂಡಿದ್ದಾರೆ. ಈ ಗಂಭೀರ ಘಟನೆಯಿಂದಾಗಿ ಗೋವಾದ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಕೂಡ ಗಂಭೀರ ಪರಿಣಾಮವುಂಟಾಗುವ ಸಾಧ್ಯತೆಯಿದೆ. ಇಂತಹ ಅಸುರಕ್ಷಿತ ಮತ್ತು ಅನಧೀಕೃತ ಉದ್ಯೋಗ ನಡೆಸುವ ಸ್ಫಾ ವಿರುದ್ಧ ಗೋವಾ ಸರ್ಕಾರ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.