ಸುದ್ಧಿಕನ್ನಡ ವಾರ್ತೆ
ಗೋವಾ ಶಿಪ್ ಯಾರ್ಡ ವತಿಯಿಂದ ಭಾರತೀಯ ಕರಾವಳಿ ಕಾವಲು ಪಡೆಗಾಗಿ ನಿರ್ಮಿಸುತ್ತಿರುವ 8 ಫಾಸ್ಟ ಪೆಟ್ರೋಲ್ ಹಡಗುಗಳಲ್ಲಿ 5 ನೇಯ ಹಡಗನ್ನು ಗೋವಾ ಶಿಪ್ ಯಾರ್ಡ ನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಹಡಗಿಗೆ ಅಟಲ್ ಎಂದು ಹೆಸರಿಡಲಾಗಿದ್ದು, ಈ ಹಡಗನ್ನು ಐಡಿಎಎಸ್,ಪಿಐಎಫ್ ಎ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಉಧ್ಘಾಟಿಸಲಾಗಿದೆ.

ಈ ಸಮಾರಂಭದಲ್ಲಿ ಐಜಿ ಸುಧೀರ್ ಸಾಹ್ನಿ, ಟಿಎಂ,ಡಿಡಿಜಿ ಮತ್ತು ಐಸಿಜಿಯ ಹಿರೀಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಗಳಾಗಿ ಉಪಸ್ಥಿತರಿದ್ದ ರೋಜಿ ಅಗರವಾಲ್ ಮಾತನಾಡಿ- ಈ ಹಡಗುಗಳನ್ನು ಐಸಿಜಿಯ ಅವಶ್ಯಕತೆಗಳನ್ನು ಪೂರೈಸಲು ಗೋವಾ ಶಿಪ್ ಯಾರ್ಡ ಲಿಮಿಟೆಡ್ ಸ್ಥಳೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಿದೆ ಎಂಬ ಮಾಹಿತಿ ನೀಡಿದರು.

ಈ ಹಡಗು 52 ಮೀಟರ್ ಉದ್ಧ, 8 ಮೀಟರ್ ಅಗಲ ಹೊಂದಿದೆ, ಮತ್ತು 320 ಟನ್ ಭಾರವನ್ನು ಸ್ಥಳಾಂತರಿಸುವ ಸಾಮಥ್ರ್ಯ ಹೊಂದಿದೆ. ಈ ಸುಧಾರಿತ ವೇಗದ ಗಸ್ತು ಹಡಗು ಐಸಿಜಿಗೆ ಕಡಲಾಚೆಯ ಆಸ್ತಿಗಳು ಮತ್ತು ದ್ವೀಪ ಪ್ರದೇಶಗಳನ್ನು ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಅವುಗಳ ಪ್ರಾಥಮಿಕ ಪಾತ್ರವೆಂದರೆ ಮೀನುಗಾರಿಕೆ ರಕ್ಷಣೆ ಮತ್ತು ದ್ವೀಪ ಪ್ರದೇಶಗಳು ವಿಶೇಷ ಆರ್ಥಿಕ ವಲಯ ಮತ್ತು ಕರಾವಳಿ ಗಸ್ತುಗಳ ಸುತ್ತಲೂ ಮೇಲ್ವಿಚಾರಣೆ. ಹಡಗುಗಳು ಕಳ್ಳಸಾಗಾಣೆ ವಿರೋಧಿ, ಕಡಲ್ಗಳ್ಳತನ ವಿರೋಧಿ, ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸಹ ನಿರ್ವಹಿಸಲಿದೆ.