ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ಗೋವಾದ ವಾಸ್ಕೊದ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಸೋಮವಾರ ರಾತ್ರಿ ಬೆಳಗಾಂವ ಮೂಲದ ವ್ಯಕ್ತಿ ನಡೆಸಿದ್ದ ಧರೋಡೆ ಯತ್ನವನ್ನು ಪೋಲಿಸರು ವಿಫಲಗೊಳಿಸಿದ್ದಾರೆ. ವಾಸ್ಕೊ ಪೋಲಿಸರು ರಾತ್ರಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಬ್ಯಾಂಕ್ ಧರೋಡೆಗೆ ಯತ್ನಿಸುತ್ತಿದ್ದ ಈ ವ್ಯಕ್ತಿಯನ್ನು ಪೋಲಿಸರು ಸೆರೆ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಯಪ್ಪಾ ಚನ್ನಪ್ಪ ಶ್ರೀರಾಗಣವಿ (50) ಎಂದು ಗುರುತಿಸಲಾಗಿದ್ದು ಈತ ವಾಸ್ಕೊದ ವರುಣಾಪುರಿ-ಮಂಗೋರಹಿಲ್ ನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಬಂಧಿತ ಆರೋಪಿಯು ತಾನು ಬ್ಯಾಂಕ್ ಧರೋಡೆಗೆ ಬಂದಿರುವುದನ್ನು ಒಪ್ಪಿಕೊಂಡಿರುವುದಾಗಿ ಪೋಲಿಸರು ಮಾಹಿತಿ ನೀಡಿದ್ದಾರೆ. ವಾಸ್ಕೊದ ಜೋಶಿ ಚೌಕದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಬಳಿ ಈ ಘಟನೆ ನಡೆದಿದೆ. ಎಂದಿನಂತೆಯೇ ಪೋಲಿಸರು ರಾತ್ರಿ ರೈಲ್ವೆ ನಿಲ್ದಾಣದ ಬಳಿಯಿಂದ ವಾಸ್ಕೊ ಪೋಲಿಸರು ಗಸ್ತು ತಿರುಗುತ್ತಿದ್ದರು. ಪೋಲಿಸರು ಈಟರ್ ಡೆನ್ ರೆಸ್ಟೊರೆಂಟ್ ಬಳಿ ಬರುತ್ತಿದ್ದಂತೆಯೇ ಅಲ್ಲಿಯೇ ಇದ್ದ ಬ್ಯಾಂಕ್ ಹಿಂಬದಿಯಿಂದ ಏನೋ ಸದ್ದು ಬರುತ್ತಿರುವುದನ್ನು ಪೋಲಿಸರು ಗಮನಿಸಿದರು. ಕೂಡಲೇ ಬ್ಯಾಂಕ್ ಹಿಂಬಾಕ್ಕೆ ಪೋಲಿಸರು ತೆರಳಿದಾಗ ವ್ಯಕ್ತಿಯೋರ್ವ ಬ್ಯಾಂಕ್ ಕಿಡಕಿ ಗ್ರಿಲ್ ಮುರಿದು ಒಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಪೋಲಿಸರು ಕೂಡಲೇ ಈ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪೋಲಿಸ್ ಅಧೀಕ್ಷಕ ಗುರುದಾಸ್ ಕದಂ , ನಿರೀಕ್ಷಕ ವೈಭವ ನಾಯಕ, ಮಾರ್ಗದರ್ಶನದಲ್ಲಿ ಉಪನಿರೀಕ್ಷಕ ಪ್ಲೆಟೊ ಕಾರ್ವಾಲೊ, ಹವಾಲ್ದಾರ್ ಸಂತೋಷ ಭಾಟಕರ್, ಪುರೊಷೋತ್ತಮ ನಾಯಕ್, ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
