ಸುದ್ಧಿಕನ್ನಡ ವಾರ್ತೆ
ಪಣಜಿ: ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯ ಅನ್ಮೋದ್ ಘಾಟ್ ಬಳಿ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಈ ಅಪಘಾತದಲ್ಲಿ ಉತ್ತರಕನ್ನಡದ ಜೋಯಿಡಾ ನಿವಾಸಿ ಸಚಿನ್ ಸಾವರ್ಡೆಕರ್(25) ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದರು. ಹಿಂಬದಿ ಸವಾರ ಸೋನಾರ್ವಾಡಿಯ ನಿವಾಸಿ ಅಮರ್ ಠಾಕೂರ್ ಗಾಯಗೊಂಡಿದ್ದು, ಪ್ರಸ್ತುತ ರಾಮನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಹಿತಿಯ ಪ್ರಕಾರ, ಇಬ್ಬರೂ ಗೋವಾ ಕಡೆಗೆ ಪ್ರಯಾಣಿಸುತ್ತಿದ್ದಾಗ ಅನ್ಮೋದ್ ಘಾಟ್ ಬಳಿ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸಚಿನ್ ಸಾವರ್ಡೆಕರ್ ರವರು ಗೋವಾದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.
